Header Ads
Header Ads
Breaking News

ಕಾರ್ಕಳ:ಎಸ್‌ಕೆಪಿಎ ಜಂಟಿ ಆಶ್ರಯದಲ್ಲಿ ತಪಾಸಣಾ ಶಿಬಿರ

ಕಾರ್ಕಳ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಜೀವನ ಶೈಲಿಯ ರೋಗಗಳ ತಪಾಸಣಾ ಶಿಬಿರವು ಜೋಶಿ ಕನ್ಸಲ್ಟೇಶನ್‌ನಲ್ಲಿ ಜರಗಿತ್ತು.ಈ ಸಂದರ್ಭ ಶಿಬಿರವನ್ನು ಪುರಸಭಾ ಮಾಜಿ ಅಧ್ಯಕ್ಷರಾದ ಸುಭೀತ್ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಛಾಯಾಗ್ರಾಹಕರ ತುಂಬಾ ಒತ್ತಡದ ಬದುಕು ಆಗಿರುತ್ತದೆ. ಅವರಿಗಾಗಿ ಇಂಥ ಶಿಬಿರಗಳನ್ನು ಆಯೋಜಿಸಿದ್ದು ತುಂಬಾ ಉತ್ತಮ ಕೆಲಸವಾಗಿರುತ್ತದೆ ಎಂದು ಹೇಳಿದರು.

ನಂತರ ಸಂಪನ್ಮೂಲ ವ್ಯಕ್ತಿಯಾದ ಡಾ. ಕೆ. ಆರ್. ಜೋಶಿ ಮಾತನಾಡಿ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು. ಮುಖ್ಯವಾಗಿ ನಾವು ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ತರಬೇಕು ಎಂದು ಹೇಳಿದರು. ಸುಮಾರು ನೂರಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನವನ್ನು ಪಡೆದರು

ಈ ಸಂದರ್ಭದಲ್ಲಿ ಛಾಯಾಚಿತ್ರಕಾರರ ಘಟಕದ ಅಧ್ಯಕ್ಷ ಭಾಸ್ಕರ್ ಕುಲಾಲ್, ಪದ್ಮಪ್ರಸಾದ್ ಜೈನ್, ಪ್ರಸಾದ ಕುಮಾರ್, ಕಾರ್ಯದರ್ಶಿ ಸೀತಾರಾಮ್ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *