Header Ads
Header Ads
Breaking News

ಕಾರ್ಕಳದಲ್ಲಿರುವ ಕಾಂಗ್ರೆಸ್ ಯಾವುದೆಂದು ಸ್ಪಷ್ಟಪಡಿಸಲಿ: ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ

ಕಾರ್ಕಳದಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಕಾಂಗ್ರೆಸ್? ಇಲ್ಲ ಖಾಸಗಿ ಕಾಂಗ್ರೆಸ್ ಎಂಬುವುದು ಮೊದಲು ಕಾರ್ಕಳ ಬ್ಲಾಕ್ ಆದ್ಯಕ್ಷರು ಸ್ಪಷ್ಟಪಡಿಸಲಿ ನಂತರ ಉಚ್ಚಾಟನೆ ಪ್ರಕ್ರಿಯೆ ಮುಂದುವರೆಸಲಿ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಹೇಳಿದರು.ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರೀಯ ಕಾಂಗ್ರೆಸ್‌ಗೆ ತನ್ನದೇ ಆದ ನೀತಿ ನಿಯಮಗಳಿದ್ದು, ಅವರದ್ದೇ ಆದ ಸಂವಿಧಾವಿದೆ. ನಾನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದು ಆ ಪಕ್ಷದಿಂ ಅಧಿಕೃತವಾಗಿ ನನ್ನನ್ನು ಉಚ್ಚಾಟಿಸಿಲ್ಲ.

ಕಾರ್ಕಳದಲ್ಲಿರುವ ಅನಧಿಕೃತ ಕಾಂಗ್ರೆಸ್ ಸಮಿತಿ ನನ್ನನ್ನು ಪಕ್ಷದಿಂದಉಚ್ಚಾಟಿಸಿರುವುದಾಗಿ ಪತ್ರಿಕಾ ಮಾಧ್ಯಮಗಳಲ್ಲಿ ಹೇಳಿಕೆ ನೀಡಲಾಗಿದ್ದು, ಈ ಕುರಿತು ನ್ನಗೆ ಈವರೆಗೆ ಉಚ್ಚಾಟನೆ  ಸಂಬಂಧಿಸಿದಂತೆ ನೊಟೀಸ್ ಆಗಲಿ, ವಿವರಣೆಯಾಗಲಿ ದೊರೆತಿಲ್ಲ. ನಾನು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂದು ನನ್ನ ವಿರುದ್ಧ ವೈಯುಕ್ತಿಕ ದ್ವೇಷವನ್ನು ಸಾರುವ ಮೂಲಕ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಲಾಗಿದೆ. ಪಕ್ಷ ವಿರೋಧಿ ಮಾಡಿದ್ದಲ್ಲಿ ಪಕ್ಷದಿಂದ ಯಾವುದೇ ಕಾರ್ಯಕರ್ತರನನ್ನು ಉಚ್ಚಾಟಿಸಬೇಕಾದರೆ ಪಕ್ಷಕ್ಕೆ ಅವರದ್ದೇ ಆದ ನಿಯಮ ಹಾಗೂ ಬದ್ಧತೆಗಳಿವೆ. ಏಕಾ ಏಕಿ ಅಧ್ಯಕ್ಷರು ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Related posts

Leave a Reply