Header Ads
Header Ads
Breaking News

ಕಾರ್ಕಳದಲ್ಲಿ ಆರೋಗ್ಯಯುತವಾದ ಸ್ಪರ್ಧೆ ಉಡುಪಿಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಉಡುಪಿಯಲ್ಲಿ ವಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ ಹೇಳಿಕೆ

ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಕಾರ್ಕಳದಲ್ಲಿ ಆರೋಗ್ಯಯುತವಾದ ಸ್ಪರ್ಧೆ ಇದೆ. ಜಿಲ್ಲೆಯಲ್ಲಿರುವ ವಾತಾವರಣ ನೋಡಿದರೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ವಿಪಕ್ಷ ನಾಯಕ ಉಗ್ರಪ್ಪ ತಿಳಿಸಿದ್ದಾರೆ.

ಇಂದು ಉಡುಪಿಗೆ ಭೇಟಿ ನೀಡಿದ ಉಗ್ರಪ್ಪ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಬಳಿ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀರಪ್ಪ ಮೋಯ್ಲಿ ಪುತ್ರ ಹರ್ಷ ಮೋಯ್ಲಿ ಕೂಡ ಕಾರ್ಕಳ ಕ್ಷೇತ್ರದಲ್ಲಿ ರೇಸ್ ನಲ್ಲಿದ್ದಾರೆ. ಉಡುಪಿ, ಬೈಂದೂರು, ಕುಂದಾಪುರ, ಕಾಪು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ಸಾಧ್ಯತೆಯಿದೆ.ಕಾರ್ಕಳದಲ್ಲಿ ಮೂವರು ಆಕಾಂಕ್ಷಿಗಳನ್ನು ಕೂರಿಸಿ ಒಮ್ಮತದ ಅಭಿಪ್ರಾಯಕ್ಕೆ ಬರುತ್ತೇವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಲಂ ಏರಿಯಾದ ನೆನಪು ಯಡಿಯೂರಪ್ಪನವರಿಗೆ ಬಂದಿದೆ. ಬಿಎಸ್ ವೈ ಅಧಿಕಾರದಲ್ಲಿದ್ದಾಗ ಸ್ಲಂ ನೆನಪಿಗೆ ಬಂದಿಲ್ಲ. ರಾಜ್ಯದ ರೈತರ ನೆನೆಪು ಬಂದಿಲ್ಲ. ಆದರೆ ಈಗ ಎಲ್ಲವೂ ನೆನಪಿಗೆ ಬರುತ್ತೆ. ಇನ್ನು ರಾಹುಲ್ ಗಾಂಧಿ ಶ್ರೀಕೃಷ್ಣಮಠಕ್ಕೆ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವ್ರು, ರಾಹುಲ್ ಗಾಂಧಿ ಅವರು ಉಡುಪಿಗೆ ಬಂದಾಗ ಕೃಷ್ಣಮಠಕ್ಕೆ ಭೇಟಿ ನೀಡಬಹುದು. ಮಠಗಳ ಭೇಟಿಯಿಂದ ಓಟು ಗಳಿಸುವ ಮನಸ್ಥತಿ ನಮ್ಮ ನಾಯಕರಲ್ಲಿ ಇಲ್ಲ. ನಾನು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪೇಜಾವರ ಹಾಗೂ ಪರ್ಯಾಯ ಪಲಿಮಾರು ಶ್ರೀಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಈ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ನಾವು ನಿಜವಾದ ಹಿಂದುಗಳು, ಬಿಜೆಪಿಯವರು ಡೋಂಗಿ ಹಿಂದುಗಳು. ವಿವೇಕಾನಂದರ ಹಿಂದುತ್ವದ ಮೇಲೆ ವಿಶ್ವಾಸವಿದೆ. ಶ್ರೀಕೃಷ್ಣಮಠಕ್ಕೆ ಸಿದ್ದರಾಮಯ್ಯರನ್ನೂ ರಾಹುಲ್ ಗಾಂಧಿ ಕರೆಸಬಹುದು. ಅಥವಾ ಕೃಷ್ಣನೇ ಕರೆಸಿಕೊಳ್ಳುತ್ತಾನೆ. ಶ್ರೀಕೃಷ್ಣನೇ ಕನಕದಾಸರನ್ನು ಕರೆಸಿಕೊಂಡಿದ್ದಾನೆ ಎಂದವರು ಹೇಳಿದರು.

ವರದಿ: ಪಲ್ಲವಿ ಸಂತೋಷ ಉಡುಪಿ

Related posts

Leave a Reply