Header Ads
Header Ads
Breaking News

ಕಾರ್ಕಳದಲ್ಲಿ ಈದ್ ಸೌಹಾರ್ದ ಶಾಂತಿ ಸಭೆ

ಕಾರ್ಕಳದ ಪುಲ್ಕೇರಿ ಯಂಗ್ ಮೆನ್ಸ್ ಸಹೋದರರು ಇವರ ವತಿಯಿಂದ ಕಾರ್ಕಳ ಖಾಸಗಿ ಹೋಟೆಲ್‌ನಲ್ಲಿ ಈದ್ ಸೌಹಾರ್ದ ಶಾಂತಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಎಸ್.ಸಿ.ಡಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಅಲ್ಪ ಸಂಖ್ಯಾತರ ಶಾಂತಿ ಸಭೆ ಕರೆಯಬೇಕಾದರೆ ನಾವು ಅದಕ್ಕೆ ಕೈ ಜೋಡಿಸಬೇಕು. ನಾವು ಅಲ್ಪ ಸಂಖ್ಯಾತ ಎಂಬ ಶಬ್ದವನ್ನು ಬಿಟ್ಟು ಮುಂದೆ ಹೋಗಬೇಕು. ನಾವು ಭಾರತೀಯ ಪ್ರಜೆ ಎಂದು ನಂಬಿ ಕೆಲಸ ಮಾಡಬೇಕು. ನಾವು ಎಲ್ಲರ ಜೊತೆ ಬದುಕಬೇಕು. ಇನ್ನೊಬ್ಬರನ್ನು ಬದುಕಲು ಬಿಡಬೇಕು.

ಕ್ರೈಸ್ಟ್ ಕಿಂಗ್ ಶಾಲಾ ಪ್ರಾಂಶುಪಾಲರಾದ ಡಾ| ನಾರಾಯಣ ಶೆಡಿಕಜೆ ಮಾತನಾಡಿ ನಾವೆಲ್ಲ ಒಂದು ಆದರೆ ನಮ್ಮ ಜೀವನ ಶೈಲಿ ಬೇರೆಯಾಗಿರುತ್ತದೆ. ದೇವರು ಒಬ್ಬನೆ ಆದರೆ ಆರಾಧಿಸುವ ಕ್ರಮ ಬೇರೆ ಬೇರೆಯಾಗಿರುತ್ತದೆ. ಧರ್ಮವನ್ನು ಅರಳಿಸುವಂತ ಕೆಲಸ ಮಾಡಬೇಕು ಕೆರಳಿಸುವಂತ ಕೆಲಸ ಮಾಡಬಾರದು ಎಂದು ಹೇಳಿದರು. ನಂತರ ಗ್ರಾಮ ಸಾಣೂರು ಪಂಚಾಯ್ತಿ ಉಪ ಚುನಾವಣೆಯಲ್ಲಿ ವಿಜೇತರಾದ ರವೀಂದ್ರ ಶಾಂತಿಯವರವನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ| ರಿಜ್ಜನ್ ಅಹಮ್ಮದ್, ಪಾಶ್ವನಾಥ ಶರ್ಮಾ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply