Header Ads
Header Ads
Breaking News

ಕಾರ್ಕಳದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕುಕ್ಕುಂದೂರು ದುರ್ಗಾ ಹೈಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮ

ಕಾರ್ಕಳದ ಕುಕ್ಕುಂದೂರು ದುರ್ಗಾಂಬಾ ಯೂತ್ ಫ್ರೆಂಡ್ಸ್ ಅಸೋಸಿಯೇಶನ್ ಇವರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ, ಅಜ್ಜರಕಾಡು, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಕ್ಕುಂದೂರು ಪ್ರಸಾದ್ ನೇತ್ರಾಲಯ ಜಂಟಿ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಅಯ್ಯಪ್ಪ ನಗರದ ಶ್ರೀ ದುರ್ಗಾ ಹೈಸ್ಕೂಲ್ ಜರುಗಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ| ಅರುಣ್ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ನಮ್ಮ ದೇಹದಲ್ಲಿ ಅತೀ ಸೂಕ್ಷ್ಮವಾದ ಅಂಗ ಕಣ್ಣಾಗಿರುತ್ತದೆ. ನಾವು ಕಣ್ಣಿನ ಜಾಗ್ರತೆ ಮಾಡಿಕೊಳ್ಳಬೇಕು. ಕಣ್ಣಿಗೆ ಬರುವಂತಹ ಪೊರೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಬಹುಮುಖ್ಯವಾಗಿ ಮಧುಮೇಹ ರೋಗಿಗಳು ಕಾಲಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಬೇಕು. ಎಂದು ಹೇಳಿದರು.ರಕ್ತ ನಿಧಿ ವಿಭಾಗದ ವೈಧ್ಯಾಧಿಕಾರಿಗಳಾದ ಡಾ| ವೀಣಾ ಕುಮಾರಿ ಮಾತನಾಡಿ ನಾವು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ನಮ್ಮಲ್ಲಿ ರಕ್ತದ ಬಹು ದೊಡ್ಡ ಕೊರತೆ ಇದೆ. ನಾವು ಏನು ಬೇಕಾದರೂ ಕೃತಕವಾಗಿ ಮಾಡಬಹುದು. ಆದರೆ ನಾವು ರಕ್ತವನ್ನು ಕೃತಕ ಮಾಡಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಸುಮಾರು 65 ಮಂದಿ ರಕ್ತದಾನ ಮಾಡಿದರು ನಂತರ 350 ಮಂದಿ ನೇತ್ರ ಚಿಕಿತ್ಸೆಯನ್ನು ಪಡೆದರು. ವೇದಿಕೆಯಲ್ಲಿ ರಂಜಿತ್ ಶೆಟ್ಟಿ, ಗ್ರಾ. ಪಂ. ಸದಸ್ಯ ರುಕ್ಕಯ್ಯ ಶೆಟ್ಟಿಗಾರ್, ಬಾಲ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ