Header Ads
Breaking News

ಕಾರ್ಕಳದಲ್ಲಿ ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ

ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೇವಲ ಒಂದು ಪಕ್ಷದವೋಟ್ ಬ್ಯಾಂಕಿಗಾಗಿ ಸಂವಿಧಾನದ ಆಶಯ ಮತ್ತು ದೇಶದ ಜಾತ್ಯಾತೀಯ ಹಂದರವನ್ನು ನಾಶಮಾಡಿ ಪ್ರಜೆಗಳನ್ನು ಧರ್ಮ ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಪ್ರತಿಭಟನೆ ಕಾರ್ಕಳ ಜಾಮಿಯಾ ಮಸೀದಿ ಆವರಣದಲ್ಲಿ ಜರುಗಿತ್ತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಸ್ಫ್ಯಾಕ್ ಅಹಮದ್ ಮಾತನಾಡಿ ಮುಂಬರುವ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಈ ಕರಾಳ ಕಾನೂನು ರಾಷ್ಟ್ರೀಯ ಪೌರತ್ವ ನೋಂದಣಿ ಎನ್ ಆರ್‍ಸಿ ಮಸೂದೆಗೆ ವೇದಿಕೆ ಸಜ್ಜು ಗೊಳಿಸಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಕಾನೂನಿನಂತೆ ದಾಖಲೆಗಳನ್ನು ಹೊಂದಿಸಲು ವಿಫಲರಾದ ಮುಸ್ಲಿಮ ಅಲ್ಲದ ಇಲ್ಲಿನ ಇತರ ನಾಗರಿಕರನ್ನು ಈ ಪೌರತ್ವ ತಿದ್ದುಪಡಿ ಕಾಯ್ದೆಯಂತೆ ಪೌರತ್ವ ನೀಡಿ ಸಮಾಧಾನಪಡಿಸುವ ಉದ್ದೇಶ ಹೊಂದಿದೆ.

ಆದರೆ ಮುಸ್ಲಿಮರಿಗೆ ಈ ಅವಕಾಶ ಇರುವುದಿಲ್ಲ. ದಾಖಲೆಗಳನ್ನು ಹೊಂದಿಸಿ ನಾಗರಿಕತೆ ನೊಂದಣಿ ಮಾಡಲು ವಿಫಲರಾದ ಮುಸ್ಲಿಮರನ್ನು ಬಂದನ ಶಿಬಿರಗಳಲ್ಲಿ ಇಟ್ಟು ಸತಾಯಿಸುವ ಕಾರಣ ಉದ್ದೇಶವನ್ನು ಈ ಜನವಿರೋಧಿ ಸರಕಾರ ಹೊಂದಿದೆ. ಜಾತಿ-ಧರ್ಮಗಳ ಆಧಾರದ ಮೇಲೆ ಕಾನೂನನ್ನು ರಚಿಸಿ ಭವಿಷ್ಯದಲ್ಲಿ ಮುಸ್ಲಿಮರಿಗೆ ಹಕ್ಕುಗಳನ್ನು ದೊರೆಯದ ಹಾಗೆ ಮಾಡುವ ಷಡ್ಯಂತ್ರದ ಮೊದಲ ಹೆಜ್ಜೆಯಾಗಿದೆ. ನಾವು ಈ ಕಾನೂನನ್ನು ಎಂದಿಗೂ ಜಾರಿಯಾಗಲು ಬಿಡುವುದಿಲ್ಲ. ಈ ಸಂದರ್ಭದಲ್ಲಿ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾದ ಮೊಹಮ್ಮದ್ ಗೌಸ್, ಕಾರ್ಕಳ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಹಾಜಿ ಜಹೀರ್ ಖಾಸ್ಮಿ. ಹಾಗೂ ಮಸೀದಿಯ ಧರ್ಮಗುರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *