Header Ads
Header Ads
Breaking News

ಕಾರ್ಕಳದಲ್ಲಿ ಎರಡನೇ ವರ್ಷದ ಯಕ್ಷ ತೀರ್ಥ ಸಂಭ್ರಮ

ಕೀರ್ತಿಶೇಷ ಪದ್ಮನಾಭ ತಂತ್ರಿ ನಾರಾವಿ ಸಂಸ್ಕರಣ ವೇದಿಕೆಯಲ್ಲಿ ಯಕ್ಷ ತೀರ್ಥ ಕಲಾಸೇವೆ ನೂರಾಳುಬೆಟ್ಟು ಇವರ ಎರಡನೇ ವರ್ಷದ ಯಕ್ಷ ತೀರ್ಥ ಸಂಭ್ರಮವು ಕಾರ್ಕಳದ ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಜರಗಿತು. ಶ್ರೀಕೃಷ್ಣ ತಂತ್ರಿ ನಾರಾವಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರಾಧ್ಯಾಪಕ ಮುನಿರಾಜ ರೆಂಜಾಳ ಸದಾನಂದ ಆಚಾರ್ಯರು ಸತತ ಎರಡನೇ ವರ್ಷ ಯಕ್ಷ ತೀರ್ಥ ಸಂಭ್ರಮವನ್ನು ಹಾಗೂ ಪುಸ್ತಕ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಮಾಡುವಂಥದ್ದು ತುಂಬಾ ತುಂಬಾ ಹೆಮ್ಮೆಯ ಕಾರ್ಯವಾಗಿದೆ ಎಂದು ಹೇಳಿದರು. ನಂತರ ಬೇಲಾಡಿ ಜಗದೀಶ್ ಆಚಾರ್ಯ ಮೂಡಬಿದರೆ ಇವರಿಗೆ ಯಕ್ಷ ತೀರ್ಥ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಕೊರಗಪ್ಪ ಶೆಟ್ಟಿ ಇವರಿಗೆ ಲಕ್ಷ ತೀರ್ಥ ಸನ್ಮಾನ ನೀಡಿ ಗೌರವಿಸಿದರು. ನಂತರ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಭಾಷೆ ಮತ್ತು ಸಂಸ್ಕೃತಿ ಎರಡು ಕೂಡ ಒಟ್ಟೊಟ್ಟಿಗೆ ಚಲಿಸಬೇಕು ಅದು ಚಲಿಸದೆ ಇದ್ದಲ್ಲಿ ಅದು ವಿಭಿನ್ನವಾಗಿ ಸಮಾಜಕ್ಕೆ ಪೂರಕವಾಗಿ ಇರಲು ಆಗಲಿಕ್ಕೆ ಇಲ್ಲಎಂದು ಹೇಳಿದರು. ಈ ಸಂದರ್ಭದಲ್ಲಿ ತೆಂಕಿನ ತುಳು ಪ್ರಸಂಗ ಬಲಿಚಕ್ರವರ್ತಿಹಾಗೂ ಬಡಗಿನ ಸಮರ ಸೌಗಂಧಿಕ ತಾಳಮದ್ದಳೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಉದ್ಯಮಿ ಪ್ರೇಮ್ ಕುಮಾರ್ ಪ್ರಸಾದ್ ಆಚಾರ್ಯ ಬಜಗೋಳಿ ಹರಿದಸ್ ಭಟ್ ಮೀಯರು ವಾದಿರಾಜ್ ಉಪಾಧ್ಯಾಯ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *