Header Ads
Header Ads
Breaking News

ಕಾರ್ಕಳದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ನಮ್ಮದು ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿರುವ ನಾಡು. ನಾವು ಪರಸ್ಪರ ವಿವಾದ, ಚರ್ಚೆ, ದಂಗೆ, ಮುಷ್ಕರದಲ್ಲಿ ಕಾಲ ಕಳೆಯುವ ಬದಲು, ಹಿಂಸೆಯ ಮೂಲಕ ಜನರ ಮನಗೆಲ್ಲದೇ, ಪರಸ್ಪರ ಶಾಂತಿಯುತವಾಗಿ ಮಾತುಕತೆ ನಡೆಸಿ ಮಾನವೀಯತೆಯ ಮೂಲಕ ನಡೆಯಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ. ರಾಜ್ಯದ ಒಳಿತಿಗಾಗಿ ಹೋರಾಡಬೇಕು ನಿಜ. ಆದರೆ ನಾವು ಭಾರತೀಯರು ಎನ್ನುವ ಏಕತಾಭಾವ ಮರೆಯಬಾರದು ಎಂದು ಕಾರ್ಕಳ ತಹಸೀಲ್ದಾರ್ ಮಹಮ್ಮದ್ ಇಸಾಕ್ ಹೇಳಿದರು.ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕಾರ್ಕಳ ಗಾಂಧಿ ಮೈದಾನದಲ್ಲಿ ನ.1ರಂದು ನಡೆದ ರಾಜ್ಯೋತ್ಸವದ ಧ್ವಜಾರೋಹಣಗೈದು ಅವರು ಮಾತನಾಡಿದರು. ನಮ್ಮ ನಾಡು ವೀರರು, ಧ್ಯಾನಿಗಳು, ಆಡಳಿತ ಕುಶಲರು, ಕಲಾವಿದರು ಹುಟ್ಟಿ ಬೆಳದ ನಾಡು. ಕರ್ನಾಟಕ ಏಕೀಕರಣಗೊಂಡು ಅಂದಿನಿಂದ ಇಂದಿನವರೆಗೆ ಸಂಸ್ಕೃತಿ, ಸಾಹಿತ್ಯ, ಕಲೆ, ಶಿಕ್ಷಣ, ರಾಜಕೀಯ, ವಿಜ್ಞಾನ, ಲಲಿತಕಲೆ, ಜಾನಪದ, ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯಾಗಿದ್ದು, ಬೆಳವಣಿಗೆ ಯಾಗಿದೆ. ಹಲವು ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದೆ ಎಂದರು.ನಗರದ ಅನಂತಶಯನದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ ವಿಶೇಷ ಆಕರ್ಷಣೆಯ ಮೆರವಣಿಗೆ ಗಾಂಧಿ ಮೈದಾನಕ್ಕೆ ಸಾಗಿತು. ಗ್ರಾಮಾಂತರ ಠಾಣೆಯ ಪಿಎಸ್‌ಐ ಸಾಸೀರ್ ಹುಸೇನ್ ನೇತೃತ್ವದಲ್ಲಿ ಪರೇಡ್ ನಡೆಯಿತು.ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿವಾರ್ಹಣಾಧಿಕಾರಿ ಮೇ| ಹರ್ಷ, ಪೊಲೀಸ್ ಇಲಾಖೆ, ಗೃಹರಕ್ಷಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಽಕಾರಿಗಳು, ಜನಪ್ರತಿನಿಽಗಳು, ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

Leave a Reply