Header Ads
Header Ads
Header Ads
Breaking News

ಕಾರ್ಕಳದಲ್ಲಿ ಕುಖ್ಯಾತ ಚೋರರ ತಂಡ ಸೆರೆ

ಕಾರ್ಕಳ: ಅಂತರರಾಜ್ಯ ಕುಖ್ಯಾತ ಚೋರರ ತಂಡವೊಂದನ್ನು ಕಾರ್ಕಳ ಎಎಸ್ಪಿ ಋಷಿಕೇಶ್ ನೇತೃತ್ವದ ಪೊಲೀಸರ ತಂಡ ನಗರದ ಮೂರುಮಾರ್ಗ ಎಂಬಲ್ಲಿ ನಿನ್ನೆ ನಸುಕಿನ ಜಾವ ಬಂಧಿಸಿದೆ.


ಬಂಧಿತ ಆರೋಪಿಗಳು ಪೂನಾದ ಮಂಜರಿ(37), ಕೋಮಲ(35), ಸಂದೀಪ್ ಜಾದವ್(27), ಪ್ರಕಾಶ್ ಲಾಲ್ ಸಿಂಗ್ ಸಾಳುಂಕೆ(60), ವಿದ್ಯಾ ಪ್ರಕಾಶ್ ಸಾಳುಂಕೆ(50)ಕಲ್ಪನಾ ಕುನಾಲ್ ರಾಥೋಡ್(27) ಎಂದು ಗುರುತಿಸ ಲಾಗಿದೆ.
ಇವರಲ್ಲಿ ಮಂಜರಿ, ಕೋಮಲ, ಸಂದೀಪ್ ಜಾದವ್ ಎಂಬವರು ಕಾರ್ಕಳ ನಗರದ ಆಭರಣ ಜುವೆಲ್ಲರಿ ಶೋ ರೂಂ ನಲ್ಲಿ ಹಾಡಹಗಲೇ ನಡೆದ ಕಳವು ಪ್ರಕರಣದ ಆರೋಪಿಗಳಾಗಿದ್ದಾರೆ.


ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯೊಂದರಲ್ಲಿ ಗ್ರಾಹಕರ ರೀತಿಯಲ್ಲಿ ತೆರಳಿ ರೂ.80,೦೦೦ ಮೌಲ್ಯದ 2ಚಿನ್ನದ ಬಳೆಗಳನ್ನು ಎಗರಿಸಿಕೊಂಡು ಹೋಗಿರುವ ಬಗ್ಗೆ ಮೂಡಬಿದ್ರಿ ಠಾಣೆಯಲ್ಲಿ ಕೇಸುದಾಖಲಾಗಿತ್ತು.
ಆರೋಪಿಗಳ ವಶದಲ್ಲಿದ್ದ 25 ಗ್ರಾಂ ತೂಕದ ಸುಮಾರು 73,೦೦೦ ಮೌಲ್ಯದ ಬಂಗಾರದ ಉಂಗುರ-5, ಸುಮಾರು 4 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, 7 ಮೊಬೈಲ್ ಹಾಗೂ 26, 907 ನಗದನ್ನು ಇದೇ ಸಂದರ್ಭದಲ್ಲಿ ಪೊಲೀಸರು ವಶಪಡಿಸಿದ್ದಾರೆ.

Related posts

Leave a Reply