Header Ads
Breaking News

ಕಾರ್ಕಳದಲ್ಲಿ ಕೃತಕ ನೆರೆ : ವಾಹನ ಸವಾರರ ಪರದಾಟ

ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಕಳಪೆ ಒಳಚರಂಡಿ ಕಾಮಗಾರಿಯಿಂದಾಗಿ ಕೃತಕ ನೆರೆಯುಂಟಾಗಿದೆ. ಮಳೆಗಾಲ ಆರಂಭವಾಗಿ 2ತಿಂಗಳೇ ಕಳೆದರೂ ಇಷ್ಟರತನಕ ಚರಂಡಿಯ ಹೂಳೆತ್ತುವ ಕೆಲಸ ನಡೆದಿಲ್ಲ. ಅದಲ್ಲದೆ ಒಳಚರಂಡಿಯ ತ್ಯಾಜ್ಯ ನೀರು ರಸ್ತೆಗೆ ಹರಿದು ಮಳೆನೀರಿನೊಂದಿಗೆ ಸೇರಿ ಗಬ್ಬು ವಾಸನೆ ಬೀರುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಉವ ಭೀತಿ ಕೂಡಾ ಇಲ್ಲಿಯ ಸ್ಥಳೀಯರಿಗೆ ಎದುರಾಗಿದೆ. ಇನ್ನು ವಾಹನ ಸವಾರರಿಗಂತೂ ಈ ಹರಿಯುವ ನೀರಿನ ಮಧ್ಯೆ ವಾಹನ ಚಲಾಯಿಸೋದು ಕೂಡಾ ಸವಾಲಾಗಿ ಪರಿಣಮಿಸಿದೆ. ತಕ್ಷಣ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *