Header Ads
Breaking News

ಕಾರ್ಕಳದಲ್ಲಿ ಕೋವಿಡ್-19 ಜನಾಂದೋಲನ: ಪ್ರಧಾನ ಸಿವಿಲ್ ನ್ಯಾಯಾಧೀಶರಿಂದ ಚಾಲನೆ

ಕಾರ್ಕಳ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು. ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕಾರ್ಕಳ, ಪೊಲೀಸ್ ಇಲಾಖೆ ಕಾರ್ಕಳ ತಾಲೂಕು, ಆರೋಗ್ಯ ಕಾರ್ಕಳ ತಾಲೂಕು, ಇವರ ಜಂಟಿ ಸಹಯೋಗದೊಂದಿಗೆ ಕಾರ್ಕಳದ ನ್ಯಾಯಾಲಯದ ಆವರಣದಲ್ಲಿ ಕೋವಿಡ್ 19ರ ಜನಾಂದೋಲನಕ್ಕೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರೂಪಶ್ರೀ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಪ್ರಧಾನ ನ್ಯಾಯಾಧೀಶರಾದ ಪುಟ್ಟರಾಜು, ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಸತೀಶ್ ಉಪಸ್ಥಿತರಿದ್ದರು. ಜನ ಜಾಗೃತಿ ಜಾಥ ನ್ಯಾಯಾಲಯದ ಆವರಣದಿಂದ ಕಾರ್ಕಳ ಮುಖ್ಯರಸ್ತೆಯಿಂದ ಕಾರ್ಕಳ ಮುಖ್ಯ ಬಸ್ ನಿಲ್ದಾಣದವರೆಗೆ ಚಲಿಸಿತು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಕೃಷ್ಣನಂದ ಶೆಟ್ಟಿ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಾಸಿರ್ ಹುಸೇನ್, ನಗರ ಪೊಲೀಸ್  ಠಾಣಾಧಿಕಾರಿ ಮಧು, ಹಾಗೂ ಪೊಲೀಸ್  ಸಿಬಂದಿಗಳು, ಪದಾಧಿಕಾರಿಗಳಾದ ಞ. ಕೃಷ್ಣ ಶೆಟ್ಟಿ. ಜೊತೆ ಕಾರ್ಯದರ್ಶಿ ಮುಕ್ತ ಶೇನೋಯ್. ಕೋಶಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿ, ರೇಖಾ ಹೆಗ್ಡೆ. ಶೇಖರ ಮಡಿಯಾಲ್. ಮುರುಳಿ ಮುರಳಿ ದರ್ ಭಟ್. ನವೀನ್ ಚಂದ್ರ ಹೆಗ್ಡೆ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *