Header Ads
Breaking News

ಕಾರ್ಕಳದಲ್ಲಿ ಚರಂಡಿಯಲ್ಲಿ ನೆಟ್ಟಿದ್ದ ವಿದ್ಯುತ್ ಕಂಬಕ್ಕೆ ಮುಕ್ತಿ : ಇದು ವಿ4 ನ್ಯೂಸ್ ವರದಿಯ ಫಲಶೃತಿ

ಕಾರ್ಕಳ ಪುರಸಭೆಯ 22ನೇ ವಾರ್ಡ್‍ನ ಭಾರತ್ ಬೀಡಿ ಕಾಲನಿಯಲ್ಲಿ ನೀರು ಹರಿಯುವ ಚರಂಡಿಯಲ್ಲಿ ವಿದ್ಯುತ್ ಕಂಬವನ್ನು ನೆಟ್ಟಿದ್ದ ಮೆಸ್ಕಾಂ ಇದೀಗ ಅದನ್ನು ತೆರವುಗೊಳಿಸಿದೆ. ನೀರು ಹರಿಯುವ ಚರಂಡಿಯಲ್ಲಿ ವಿದ್ಯುತ್ ಕಂಬವನ್ನು ಅಳವಡಿಸಿದ ಮೆಸ್ಕಾಂ ಸಿಬ್ಬಂದಿಯ ಅವ್ಯವಸ್ಥೆಯ ಬಗ್ಗೆ ವಿ4 ನ್ಯೂಸ್‍ನ ಸುದ್ದಿಗೊಂದು ಗುದ್ದುವಿನಲ್ಲಿ ವಿಸ್ತøತ ವರದಿ ಬಿತ್ತರಿಸಲಾಗಿತ್ತು. ಅಧಿಕಾರಿಗಳನ್ನು ಈ ಬಗ್ಗೆ ಎಚ್ಚರಿಸುವ ಕೆಲಸ ಮಾಡಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ಒದಗಿಸಿದ್ದಾರೆ. ಕಾರ್ಕಳ ಮೆಸ್ಕಾಂ ಎ.ಇ. ನೇತೃತ್ವದಲ್ಲಿ ಚರಂಡಿಯಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸಲಾಗಿದೆ.

Related posts

Leave a Reply

Your email address will not be published. Required fields are marked *