Header Ads
Breaking News

ಕಾರ್ಕಳದಲ್ಲಿ ಜನತಾ ಕರ್ಫ್ಯೂ ಗೆ ಬೆಂಬಲ: ಸಂಪೂರ್ಣ ಸ್ತಬ್ಧಗೊಂಡ ಕಾರ್ಕಳ

ಕಾರ್ಕಳ: ಜನತಾ ಕರ್ಫ್ಯೂ ಬೆಂಬಲಿಸಿ ವೈರಸ್ ಬಡಿದೋಡಿಸಿ ಕೊರೊನ ಮಣಿಸೋಣ ಈ ಹಿನ್ನೆಲೆಯಲ್ಲಿ ಇಂದು ಕಾರ್ಕಳದಲ್ಲಿ ಯಶಸ್ವಿಯಾಗಿ ಬಂದ್ ಆಚರಿಸಲಾಯಿತು.

ಕಾರ್ಕಳ ಬಂಡೀಮಠ ಬಸ್ ನಿಲ್ದಾಣದಲ್ಲಿ ವಾಹನಗಳು ಹಾಗೂ ಹೋಟೆಲ್ ಬಂದ್ ಆಗಿದ್ದು ಗಣಪತಿ ದೇವಸ್ಥಾನದಲ್ಲಿ ಭಕ್ತರು ಇಲ್ಲದೆ ದೇವಸ್ಥಾನ ಬಣಗುಡುತ್ತಿತ್ತು. ಗಾಂಧಿ ಮೈದಾನದಲ್ಲಿ ಯುವಕರ ತಂಡ ರಾಜಾರೋಷವಾಗಿ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಗಾಂಧಿ ಮೈದಾನದ ಬಳಿ ಇರುವ ಚರ್ಚಿನಲ್ಲಿ ಇಂದಿನ ಭಾನುವಾರದ ವಿಶೇಷ ಪೂಜೆ ಜರುಗಲಿಲ್ಲ. ಕಾರ್ಕಳದ ಎಲ್ಲಾ ಪೆಟ್ರೋಲ್ ಬಂಕ್‍ಗಳು ಬಂದ್ ಆಗಿದ್ದು ಕೇವಲ ಒಂದು ಪೆಟ್ರೋಲ್ ಬಂಕಿನಲ್ಲಿ ವ್ಯವಹಾರ ನಡೆಯುತ್ತಿದ್ದು ಕಂಡುಬಂತು. ಕಾರ್ಕಳದ ಮುಖ್ಯ ಮಾರುಕಟ್ಟೆಯಲ್ಲಿ ಸಂಪೂರ್ಣಮಾರುಕಟ್ಟೆಯಲ್ಲಿ ವ್ಯವಹಾರ ಸ್ಥಗಿತಗೊಂಡು ಯುವಕರು ಮಾರುಕಟ್ಟೆ ಒಳಗೆ ಆಟದಲ್ಲಿ ನಿರತರಾಗಿದ್ದು ಕಂಡುಬಂತು. ಕಾರ್ಕಳ ಬಸ್ ನಿರತರಾಗಿದ್ದು ನಿಲ್ದಾಣ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು. ಒಂದೆರಡು ಆಟೋರಿಕ್ಷಾಗಳು ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ನಿಂತಿರುವುದು ಕಂಡು ಬಂತು. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಶಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿಗಳಿಗೆ ಬಂದಿದೆ.

Related posts

Leave a Reply

Your email address will not be published. Required fields are marked *