Breaking News

ಕಾರ್ಕಳದಲ್ಲಿ ನೂರಾರು ಭಕ್ತರಿಂದ ಮಾರಿಪೂಜೆ, ದೇವಿಯ ದರ್ಶನ ಪಡೆದು ಹರಕೆ ತೀರಿಸಿದ ಭಕ್ತರು


ಕಾರ್ಕಳದಲ್ಲಿ ಎರಡು ದಿನಗಳ ಕಾಲ ನಡೆಯುವ ಮಾರಿಪೂಜೆಗೆ ಮಂಗಳವಾರ ಬೆಳಗ್ಗಿನಿಂದಲೇ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆಗಳನ್ನು ನೀಡಿ ದೇವಿಯ ಆಶೀರ್ವಾದ ಪಡೆದರು.
ಮಾರಿ ಪೂಜೆಯನಂತರ ಕಾರ್ಕಳದ ದೆವಸ್ಥಾನಗಳಲ್ಲಿ ಯಾವ ಉತ್ಸವವೂ ನಡೆಯುವುದಿಲ್ಲ ಮೇ. ೧೭ರ ಬೆಳಗ್ಗಿನಿಂದ ಸಂಜೆಯವರೆಗೆ ಪೂಜೆ ಪುರಸ್ಕಾರಗಳು ನಡೆಯಲಿದೆ. ಬಳಿಕ ಮಾರಿ ದೇವಿಯ ವಿಗ್ರವನ್ನು ಕಾಡಿಗೆ ತೆಗೆದುಕೊಂಡು ಹೋಗಿ ವಿಸರ್ಜಿಸುವ ಕ್ರಮವೂ ಇದೆ. ಮಾರಿ ದೇವಿಯು ಈ ಊರಿನಲ್ಲಿರುವ ಕಷ್ಟ ಕಾರ್ಪಣ್ಯ ರೋಗ ರುಜಿನಗಳನ್ನು ತನ್ನೊಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವ ಕ್ರಮವಿದೆ ಎಂದು ಭಕ್ತಾಧಿಗಳು ಹೇಳುತ್ತಾರೆ. ಇನ್ನೂ ಮಾರಿಪೂಜೆಯ ಸಂದರ್ಭದಲ್ಲಿ ಭಕ್ತರಿಗೆ ಜ್ಯೋತಿ ಫ್ರೆಂಡ್ಸ್ ಕಾಳಿಕಾಂಬದ ವತಿಯಿಂದ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು.

Related posts

Leave a Reply