Header Ads
Breaking News

ಕಾರ್ಕಳದಲ್ಲಿ ಪರಿಸರ ಉತ್ಸವ ಆಚರಣೆ

ಕಾರ್ಕಳ: ಕಳೆದ ಮೂರು ವರ್ಷಗಳಿಂದ ಪರಿಸರ ಉತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಸಹಕಾರದಿಂದ 10 ಸಾವಿರ ಸಸಿಗಳನ್ನು ಏಕಕಾಲದಲ್ಲಿ ನೆಡುವ ಸತ್ಕಾರ್ಯ ನಡೆದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಂತರ್‌ಜಲ ವೃದ್ಧಿಗೆ ಕಾರಣವಾಗಲಿದೆ. ನೆಟ್ಟ ಗಿಡಗಳನ್ನು ಬೆಳೆಸುವುದು ಒಂದು ಸವಾಲಾಗಿದೆ. ಗಿಡಗಳನ್ನು ನೆಟ್ಟು ಪೋಷಿಸುವ ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಸಂಬಂಧ ಪಟ್ಟವರನ್ನು ಗೌರವಿಸುವ ಕಾರ್ಯವು ಮುಂದಿನ ದಿನಗಳಲ್ಲಿ ತಾಲೂಕು ಆಡಳಿತದಿಂದ ನಡೆಯಲಿದೆ ಎಂದು ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಹೇಳಿದರು.

ಅವರು ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಕಾರ್ಕಳ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಹಾಗೂ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದೊಂದಿಗೆ ಹಸಿರು ಕರ್ನಾಟಕ ಪರಿಸರ ಉತ್ಸವ-2019 ಇದು ಕಾರ್ಯಕ್ರಮವಲ್ಲ-ನಮ್ಮೆಲ್ಲರ ಭವಿಷ್ಯ ಹಿತ ಘೋಷವಾಕ್ಯದೊಂದಿಗೆ ಕುಕ್ಕುಂದೂರು ಗ್ರಾಮ ಪಂಚಾಯತ್ ನ ಮೈದಾನದಲ್ಲಿ ಆಯೋಜಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಐತಿಹಾಸಿಕ ರಾಮಸಮುದ್ರ ಸ್ಥಿತಿಗತಿಯ ಬಗ್ಗೆ ಕಾಳಜಿ ವಹಿಸಿದ ತಂಡದಿಂದ ಮುಂದಿನ ದಿನಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯಲಿದೆ. ಅದಕ್ಕೆ ಇತರರು ಕೈಜೋಡಿಸಬೇಕೆಂದರು ಕರೆ ನೀಡಿದರು.

ಕಾರ್ಕಳ ಪ್ರಾದೇಶಿಕ ವಲಯ ಅರಣ್ಯ ಇಲಾಖಾಧಿಕಾರಿ ದಿನೇಶ್‌ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಹೆಬ್ರಿ ತಹಶೀಲ್ದಾರ್ ಮಹೇಶ್ವಂದ್ರ, ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್, ಎಪಿಎಂಸಿ ಅಧ್ಯಕ್ಷ ಮಾಪಾಲು ಜಯವರ್ಮ ಜೈನ್, ಜಿಲ್ಲಾ ಪಂಚಾಯತ್ ಸದಸ್ಯರಾದ ಇರ್ವತ್ತೂರು ಉದಯ ಎಸ್.ಕೋಟ್ಯಾನ್, ಜ್ಯೋತಿ ಪೂಜಾರಿ, ದಿವ್ಯಶ್ರೀ ಅಮೀನ್, ರೇಷ್ಮಾ ಶೆಟ್ಟಿ, ಸುಮಿತ್ ಶೆಟ್ಟಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಸುಮನಾ ರಾವ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *