Header Ads
Header Ads
Breaking News

ಕಾರ್ಕಳದಲ್ಲಿ ಮನೆಗೆ ನುಗ್ಗಿ ದರೋಡೆ: ಚಿನ್ನ, ನಗದು ದೋಚಿ ಪರಾರಿ

ನಿನ್ನೆ ತಡರಾತ್ರಿ ಮನೆಯ ಹಿಂಬಾಗಿಲಿನಿಂದ ಒಳ್ಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಪತಿ, ಪತ್ನಿಗೆ ಮಾರಾಂಣಾತಿಕ ಹಲ್ಲೆ ನಡೆಸಿ ಚಿನ್ನ ಮತ್ತು ನಗದನ್ನು ದೋಚಿ ಪರಾರಿಯಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ನಡೆದಿದೆ.

ಕಾರ್ಕಳ ಕಸಬಾ ಗ್ರಾಮದ ಬಂಗ್ಲಗುಡ್ಡೆ ಜಂಕ್ಷನ್ ಬಳಿ ಇರುವ ಬಿಎಸ್‌ಎನ್‌ಎಲ್ ನೌಕರಿಯಾದ ಯಶೋದ ಹಾಗೂ ವಿಜಯಾ ಬ್ಯಾಂಕ್ ನಿವೃತ್ತ ಸಂಜೀವ್ ನಾಯ್ಕ್ ಎಂಬರಿಗೆ ಸೇರಿದ ಮನೆಗೆ ತಡರಾತ್ರಿ ಮೂವರನ್ನು ಒಳಗೊಂಡ ದರೋಡೆಕೋರರ ತಂಡ ಮನೆಯ ಹಿಂಬಾಗಿನ್ನು ತಟ್ಟಿದ್ದಾರೆ. ಮನೆಯ ಮಾಲಿಕ ಶಬ್ದ ಕೇಳಿ ಯಾರೂ ಪರಿಚಯಸ್ಥರು ಇರಬಹುದೆಂದ ಬಾವಿಸಿ ಮನೆಯ ಬಾಗಿಲನ್ನು ತೆಗೆದ ಕ್ಷಣದಲ್ಲಿ ಕಳ್ಳರು ಮಾರಾಕಾಯದವನ್ನು ತೋರಿಸಿ ಬೆದರಿಸಿ ಸಂಜೀವ್ ನಾಯ್ಕ್ ಮತ್ತು ಅವರ ಪತ್ನಿಗೆ ಗಂಭೀರವಾಗಿ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾ ಹಾಗೂ ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ.
ಇದೀಗ ಹಲ್ಲೆಗೊಳಗಾದ ಸಂಜೀವ್ ನಾಯ್ಕ್ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಆಗಮಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ತನಿಖೆಯನ್ನು ಮುಂದುವರಿಸಿದ್ದಾರೆ.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply