Header Ads
Breaking News

ಕಾರ್ಕಳದಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್‌ರಿಂದ ಮತಯಾಚನೆ

ಕಾರ್ಕಳದಲ್ಲಿ ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಕಾರ್ಕಳದ ಅನಂತಶಯನದಿಂದ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ಪಾದಯಾತ್ರೆಯ ಮೂಲಕ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಅವರ ತೀರ್ಪಿಗೆ ನಾವು ತಲೆಬಾಗಬೇಕಾಗುತ್ತದೆ. ನಾನು ಉಡುಪಿ ಚಿಕ್ಕಮಂಗಳೂರು ಕಡೆ ಮತಯಾಚನೆ ಹೋದ ಸಂದರ್ಭದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧದ ಅಲೆ ಕಂಡುಬರುತ್ತದೆ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುವುದರಿಂದ ಗೆಲ್ಲುವುದರಲ್ಲಿ ಸಂಶಯವಿಲ್ಲ. ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗೋಪಾಲ ಭಂಡಾರಿ ಶೇಖರ ಮಡಿವಾಳ ಉದಯ್ ಕುಮಾರ್ ಶೆಟ್ಟಿಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *