Header Ads
Header Ads
Breaking News

ಕಾರ್ಕಳದಲ್ಲಿ ರಾಜ್ಯ ಮಟ್ಟದ ೭ನೇ ಪಂಜ ಕುಸ್ತಿ ಪಂದ್ಯಾಟ

ಕಾರ್ಕಳ: ರಾಜ್ಯ ಮಟ್ಟದ ೭ನೇ ಪಂಜ ಕುಸ್ತಿ ಪಂದ್ಯಾಟವು ಕಾರ್ಕಳದ ಬಂಡೀಮಠ ಬಸ್ ನಿಲ್ದಾಣದ ಶ್ರೀ ರಾಮ ಸಭಾಭವನದಲ್ಲಿ ನಡೆಯಲಿದೆ. ಹೆಸರಾಂತ ಕುಸ್ತಿ ಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ನಡೆಯುವ ಪ್ರಥಮ ಪಂಜ ಕುಸ್ತಿ ಇದಾಗಿದೆ ಎಂದು ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘದ ಕಾರ್ಯದರ್ಶಿ ಮಹಮ್ಮದ್ ಆಲಿ ಹೇಳಿದರು.

ನಗರದ ಹೊಟೇಲ್ ಪ್ರಕಾಶ್ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘ, ಕಾರ್ಕಳ ಮತ್ತು ಫ್ರೆಂಡ್ಸ್ ಪವರ್ ಜಿಮ್ಸ್ ಕೋಡುರಸ್ತೆ ಇದರ ಆಶ್ರಯದಲ್ಲಿ ಕಾರ್ಕಳದಲ್ಲಿ ಪ್ರಥಮ ಬಾರಿಗೆ ನಡೆಯುವ ರಾಜ್ಯ ಮಟ್ಟದ ೭ನೇ ಪಂಜ ಕುಸ್ತಿ ಚಾಂಪಿಯನ್‌ಶಿಪ್ ಸ್ಪರ್ಧೆ ಇದಾಗಿದೆ ಎಂದು ಹೇಳಿದರು.
ಫೆಬ್ರವರಿ ೩ರ ಬೆಳಗ್ಗೆ ಶಾಸಕ ವಿ.ಸುನೀಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುನಿಯಾಲು ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೬ಕ್ಕೆ ಜರಗಲಿರುವ ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಮಾಜಿ ಶಾಸಕ ಹೆಚ್. ಗೋಪಾಲ್ ವಹಿಸಲಿದ್ದಾರೆ.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಧ್ಯಕ್ಷ ಜಯವಂತ ಕಾಮತ್, ಅಧ್ಯಕ್ಷ ಯೋಗೀಶ್ ಸಾಲಿಯಾನ್, ಸಲಹಾ ಸಮಿತಿಯ ಅಧ್ಯಕ್ಷ ನವೀನ್ ನಾಯಕ್, ಕಾನೂನು ಸಲಹೆಗಾರ ನವೀನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply