Header Ads
Header Ads
Header Ads
Breaking News

ಕಾರ್ಕಳದಲ್ಲಿ ‘ರಾಮರಾಜ್ಯ’ ನಾಟಕ ಕೃತಿ ಲೋಕಾರ್ಪಣೆ ಸಾಹಿತಿ ಹಾಗೂ ಕವಿ ಅಂಬಾತನಯ ಮುದ್ರಾಡಿರಿಂದ ಬಿಡುಗಡೆ

ಹಿರಿಯ ಸಾಹಿತಿ ಹಾಗೂ ಕವಿ ಅಂಬಾತನಯ ಮುದ್ರಾಡಿಯವರು ರಚಿಸಿದ ‘ರಾಮರಾಜ್ಯ’ ನಾಟಕ ಕೃತಿಯನ್ನು ಕಾರ್ಕಳದ ಬಂಡೀಮಠ ಬಸ್ ನಿಲ್ದಾಣದ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು. ಅಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಮೌನ ಜಗತ್ತು ತುಂಬ ಬಲಿಷ್ಠವಾದುದಾಗಿದೆ. ಪ್ರೀತಿ, ವಿಶ್ವಾಸ, ಪ್ರೇಮ ಕಳೆದುಹೋದರೆ ಈ ಜಗತ್ತಿನಲ್ಲಿ ಮತ್ತೇನಿದೆ. ಜಗತ್ತು ಹೊಸತನು ಹುಡುಕುತ್ತಾ ಇರುತ್ತದೆ. ಜಗತ್ತು ತಕ್ಷಣದ ಫಲಿತಾಂಶಕ್ಕಾಗಿ ಕಾಯುತ್ತಿದೆ. ಅದು ಕ್ಷಣಿಕವು ಆಗಿದೆ ಎಂಬುವುದನ್ನು ಮರೆಯಬಾರದು ಎಂದರು.ಈ ವೇಳೆ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ರಿಜಿಸ್ಟ್ರಾರ್ ಡಾ. ಎಚ್. ಶಾಂತರಾಮ ವಹಿಸಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ.)ದ ಅಧ್ಯಕ್ಷ ಕೆ. ಪದ್ಮಾಕರ ಭಟ್ ಮತ್ತಿತರು ಉಪಸ್ಥತಿರಿದ್ದರು.

Related posts

Leave a Reply