Header Ads
Header Ads
Breaking News

ಕಾರ್ಕಳದಲ್ಲಿ ಸರ್ವಜ್ಞ ವೃತ್ತದ ಉದ್ಘಾಟನೆ

ಕಾರ್ಕಳ ತಾಲೂಕು ಪಂಚಾಯತ್ ಕುಕ್ಕುಂದೂರು, ಕುಲಾಲ ಸಂಘ ಕಾರ್ಕಳ, ಕುಲಾಲ ಯುವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಎದುರುಗಡೆ ಸರ್ವಜ್ಞ ವೃತ್ತದ ಉದ್ಘಾಟನಾ ಕಾರ್ಯಕ್ರನ ನಡೆಯಿತು.ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ವೃತ್ತ ಉದ್ಘಾಟಿಸಿ, ಆರ್ಶೀವಚನ ನೀಡಿದರು.

ಕರ್ನಾಟಕ ರಾಜ್ಯ ಕುಲಾಲ ಕುಂಬಾರ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಮಾತನಾಡಿ, ಜಾತ್ಯತೀತ ನಿಲುವನ್ನು ಸರ್ವಜ್ಞ ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಆದರೆ ಸರ್ವಜ್ಞನ ಬುದ್ಧಿಮತ್ತೆಗೂ ತೊಡಕು ತರುವಂತಹ ಪ್ರಯತ್ನಗಳನ್ನು ಕೂಡ ಮಾಡಿದವರಿದ್ದಾರೆ. ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ| ಹರ್ಷ, ಜಿ.ಪಂ. ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ ಇನ್ನಾ, ಉದಯ ಎಸ್. ಕೋಟ್ಯಾನ್, ಸುಮಿತ್ ಶೆಟ್ಟಿ, ಜ್ಯೋತಿ, ತಾ.ಪಂ. ಸದಸ್ಯರಾದ ಅಶೋಕ್ ಶೆಟ್ಟಿ, ಸುಧಾಕರ ಶೆಟ್ಟಿ, ಉಪಸ್ಥಿತರಿದ್ದರು.

Related posts

Leave a Reply