Header Ads
Header Ads
Breaking News

ಕಾರ್ಕಳದಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ. ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮ. ಗ್ರಾಮ ಸ್ವಚ್ಛತೆಗೆ ಕೈ ಜೋಡಿಸಿದ ಸಾಣೂರು ಯುವಕರ ತಂಡ.

ಕಾರ್ಕಳ: ಪ್ರಧಾನಿ ನರೇಂದ್ರ ಮೊದಿಯವರ ಸ್ವಚ್ಛ ಭಾರತ ಪರಿಕಲ್ಪನೆಗೆ ಕಾರ್ಕಳ ತಾಲೂಕಿನ ಸಾಣೂರು ಯುವಕ ಮಂಡಲದ ಯುವಕರ ತಂಡ ಸಾಥ್ ನೀಡಿದೆ. ಗ್ರಾಮವನ್ನು ಸ್ವಚ್ಛವಾಗಿಡಲು ಇತರ ಯುವಕ ಸಂಘಗಳಿಗೆ ಮಾದರಿ ಎನಿಸಿದೆ. ಇದು ಕಂಡು ಬರುವುದು ಕಾರ್ಕಳ ತಾಲೂಕಿನ ಹಿರಿಯ ಎನಿಸಿದ ಸಾಣೂರು ಯುವಕ ಮಂಡಲವು ಶ್ರಮದಾನದ ಮೂಲಕ ಈ ಯಶಸ್ವಿಗೆ ಹೆಜ್ಜೆ ಇಡುತ್ತಾ ಸಾಗಿದೆ.ಸ್ವಚ್ಛತೆಯ ದೃಷ್ಟಿಯಲ್ಲಿ ಮೂರು ತಿಂಗಳ ಕಾಲ ಒಂದಷ್ಟು ಯುವಕರು ಸೇರಿಕೊಂಡು ಶ್ರಮದಾನದ ಮೂಲಕ ಸ್ವಚ್ಚತೆಯ ಜತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಸಾಣೂರು ಯುವಕ ಮಂಡಲ ಮನೆಮನೆಗಳಲ್ಲಿ ಜಾಗೃತಿ ಮೂಡಿಸಲು ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದೆ. ಸ್ವಚ್ಛ ಮನೆ, ಸ್ವಚ್ಛ ಶಾಲೆ, ಸ್ವಚ್ಛ ಗ್ರಾಮ, ಸ್ವಚ್ಛ ನಗರ ಮತ್ತು ಸ್ವಚ್ಛ ಭಾರತ ಪರಿಕಲ್ಪನೆಯನ್ನು ಮೂಡಿಸುತ್ತಿದೆ. ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಿಸುವಂತೆ, ಗ್ರಾಮ ನೈರ್ಮಲ್ಯ ಕಾಪಾಡಿ ರೋಗ ತಡೆಗಟ್ಟುವಂತೆ, ಶಾಲಾ ವಠಾರ, ಧಾರ್ಮಿಕ ಕೇಂದ್ರ, ಸಾರ್ವಜನಿಕ ಸ್ಥಳ, ರಸ್ತೆಗಳನ್ನು ಸ್ವಚ್ಛವಾಗಿರುವಂತೆ, ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪರಿಸರವನ್ನು ಸ್ವಚ್ಛವಾಗಿಡುವಂತಹ ಪ್ರತಿಜ್ಞೆ ಕೈಗೊಳ್ಳುವಂತೆ ಭಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

Related posts

Leave a Reply