Header Ads
Header Ads
Breaking News

ಕಾರ್ಕಳದಲ್ಲಿ ಸ್ವಚ್ಛ ಭಾರತದ ಬೇಸಿಗೆ ಪ್ರಾಯೋಜಕ ಕಾರ್ಯಕ್ರಮ. ನೂರಾರು ದ್ವಿಚಕ್ರ ಮತ್ತು ಆಟೋ ರಿಕ್ಷಾದಿಂದ ಜಾಗೃತಿ

ಉಡುಪಿ ನೆಹರು ಯುವ ಕೇಂದ್ರ, ಸಾಣೂರು ಯುವಕ ಮಂಡಲದ ಆಶ್ರಯದಲ್ಲಿ ಸ್ವಚ್ಛ ಭಾರತದ ಬೇಸಿಗೆ ಪ್ರಯೋಜಕ ಕಾರ್ಯಕ್ರಮ ಮುರತಂಗಡಿಯಲ್ಲಿ ಸಮಾರೋಪಗೊಂಡಿತ್ತು.
ಈ ಸಂದರ್ಭದಲ್ಲಿ ಸಾಣೂರು ಗ್ರಾಮದ ದೇಂದಬೆಟ್ಟು ಆರ್ಚಕರಾದ ರಾಮ್ ಭಟ್ ದೇವತಾ ಕಾರ್ಯಕ್ರಮದೊಂದಿಗೆ ಸಮರೋಪ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿದೆ. ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಭಾರತವನ್ನು ಸ್ವಚ್ಛಗೊಳಿಸುವ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೈರ್ಮಲೀಕರಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

 

ಹೀಗೆ ನಾನಾ ವಿಧಾನಗಳ ಮೂಲಕ ದೇಶಸೇವೆ ಮಾಡುತ್ತಿದ್ದಾರೆ. ಸ್ವಚ್ಛತೆಯೇ ದೇವರನ್ನು ತಲುಪುವ ಮಾರ್ಗ ಎಂಬ ಅರಿವು ಎಲ್ಲರಲ್ಲಿ ಮೂಡತೊಡಗಿದೆ ಎಂದರು.ಉದ್ಘಾಟನೆಯಲ್ಲಿ ಮಾತಾನಾಡಿದ ವಿಲ್ಫೆರ್ ಡಿ.ಸೋಜಾ ಯುವ ಸಮನ್ವಯಾಧಿಕಾರಿ ನೆಹರೂ ಕೇಂದ್ರ ಸ್ವಚ್ಛ ಭಾರತ ಅಭಿಯಾನವು ನಗರ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ, ಸಮುದಾಯ ಶೌಚಾಲಯ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.ನಂತರ ನೂರಾರು ದ್ವೀಚಕ್ರ ವಾಹನ ಮತ್ತು ರಿಕ್ಷಾದಲ್ಲಿ ಮುರತಂಗಡಿಯಿಂದ ಕಾರ್ಕಳ ಪುಲ್ಕೇರಿ ಬೈಪಾಸ್‌ವರೆಗೆ ಜನಜಾಗೃತಿ ಜಾಥ ನಡೆಯಿತು. ಈ ಸಂದರ್ಭದಲ್ಲಿ ಗಣೇಶ್ ನಾಯ್ಕ್ ದಿವ್ಯಾ ಅಮೀನ್, ಪಂಚಾಯ್ತ್ ಅಧ್ಯಕ್ಷರು ಪಾಲ್ಗೊಗೊಂಡಿದ್ದರು.

Related posts

Leave a Reply