Header Ads
Header Ads
Breaking News

ಕಾರ್ಕಳದಲ್ಲಿ ಸ್ವಚ್ಛ ಭಾರತ ಅಭಿಯಾನ:ವಾರ್ಡಿನ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತ ಲಕ್ಷ್ಮೀನಾರಾಯಣ

ಸ್ವಚ್ಛ ನಗರ ಸುಂದರ ನಗರ’ ಫಲಕಗಳಿಗೆ ಮಾತ್ರ ಸೀಮಿತವಾಗಿರುವುದನ್ನು ನಾವು ನೋಡಿರುತ್ತೇವೆ. ಸ್ಥಳೀಯ ಆಡಳಿತ ಈ ಬಗ್ಗೆ ಕಾಳಜಿ ವಹಿಸಿದಲ್ಲಿ ಮೋದಿಯವರ ಸ್ವಚ್ಚ ಭಾರತ್’ ಅಭಿಯಾನ ಸಾರ್ಥಕತೆ ಪಡೆಯುತ್ತದೆ.

ಈ ನಿಟ್ಟಿನಲ್ಲಿ ಕಾರ್ಕಳ ಪುರಸಭೆಯ 6ನೇ ವಾರ್ಡ್ ನ ಚುನಾಯಿತ ಸ್ವತಂತ್ರ ಅಭ್ಯರ್ಥಿ ಲಕ್ಷ್ಮೀನಾರಾಯಣ ಮಲ್ಯ ಇತರರಿಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಬೆಂಬಲಿಗರೊಂದಿಗೆ ಮತ್ತು ವಾರ್ಡು ಸದಸ್ಯರುಗಳ ಸಹಕಾರ ದೊಂದಿಗೆ ಸ್ವತಃ ಕತ್ತಿ ಹಾರೆ ಪೊರಕೆ ಹಿಡಿದು ತಮ್ಮ ವಾರ್ಡಿನ ಸ್ವಛತೆಗೆ ಟೊಂಕ ಕಟ್ಟಿದಾರೆ. ಪ್ರತೀ ಭಾನುವಾರದಂದು ಅವರು ವಾರ್ಡಿನ ವಿವಿಧ ಪ್ರದೇಶದಲ್ಲಿ ಸ್ವಛತೆಯನ್ನು ಆರಂಭಿಸಿ, ನ೨೫ರಂದು ಅವರು ಶ್ರೀನಿವಾಸ ನಗರ ಪರಿಸರದಲ್ಲಿ ಸ್ವಛತೆಯನ್ನು ಕೈಗೊಂಡಿದ್ದಾರೆ. ಇವರಿಂದ ಪ್ರೇರಣೆ ಪಡೆದು ಎಲ್ಲ ೨೩ವಾರ್ಡ ಸದಸ್ಯರು ಕಾರ್ಯ ಪ್ರವ್ರತ್ತರಾದರೆ ಕೆಲವೇ ದಿನಗಳಲ್ಲಿ ಕಾರ್ಕಳ ಪುರಸಭೆಯ ಕಸ ಮುಕ್ತ ರೋಗ ಮುಕ್ತ ಸುಂದರ ನಗರವಾಗುವಲ್ಲಿ ಸಂದೇಹವಿಲ್ಲ ಎಂದು ಕಾರ್ಯಕ್ರಮದಲ್ಲಿ ಕೈಜೋಡಿಸಿದ ಶ್ರೀನಿವಾಸ ನಗರ ನಿವಾಸಿ ಸತೀಶ್ ಶೆಟ್ಟಿಗಾರ್ ಹೇಳಿರುತ್ತಾರೆ.

Related posts

Leave a Reply