Header Ads
Header Ads
Breaking News

ಕಾರ್ಕಳದಲ್ಲಿ ಹಂತಹಂತವಾಗಿ ಕೆರೆಗಳ ಅಭಿವೃದ್ಧಿ, ಕಲ್ಲಮ್ಮ ಕೆರೆ ಹೂಳೆತ್ತುವಿಕೆಗೆ ಶಾಸಕ ಸುನೀಲ್ ಕುಮಾರ್ ಚಾಲನೆ


ಕಾರ್ಕಳ ತಾಲೂಕಿನಲ್ಲಿ ಕೆರೆಗಳ ಅಭಿವೃದ್ಧಿಯಾಗುತ್ತಿದ್ದು, ಅನೇಕ ಕೆರೆಗಳ ಹೂಳೆತ್ತುವ ಕಾರ್ಯ ಮುಗಿದಿದೆ. ಇದೀಗ ಕಲ್ಲಮ್ಮ ಕೆರೆಯ ಹೂಳೆತ್ತುವ ಕೆಲಸಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮತ್ತು ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಚಾಲನೆ ದೊರಕಿತು.
ಕಲ್ಲಮ್ಮಕೆರೆ, ಹಿರಿಯಂಗಡಿ, ಕಾರ್ಕಳ ಈ ಕ್ಷೇತ್ರದಲ್ಲಿ ಪ್ರಧಾನವಾಗಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳು ಮತ್ತು ನಾಗದೇವರ ಸನ್ನಿಧಾನಗಳು ಇಲ್ಲಿದ್ದು ಅತೀ ಕಾರ್ಣಿಕವೂ ಪುರಾತನವೂ ಆಗಿದ್ದು ಈಗಾಗಲೇ ಸಾನ್ನಿಧ್ಯಗಳ ಜೀರ್ಣೋದ್ಧಾರವು ಸ್ಥಳೀಯರ ಹಾಗೂ ಊರವರ ಸಹಕಾರದಿಂದ ನಡೆದಿರುತ್ತದೆ. ಮುಂದಿನ ಹಂತವಾಗಿ ಕಲ್ಲಮ್ಮ ಕೆರೆಯ ಹೂಳೆತ್ತುವ ಕೆಲಸವು ಕಾರ್ಕಳ ಕ್ಷೇತ್ರದ ಶಾಸಕರಾದ ವಿ. ಸುನಿಲ್‌ಕುಮಾರ್ ಮತ್ತು ತಹಶೀಲ್ದಾರ್ ಗುರುಪ್ರಸಾದ್‌ರವರ ನೇತೃತ್ವದಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮದ ಮುಂದಾಳುಗಳಾಗಿ ಸ್ಥಳೀಯ ಪುರಸಭಾ ಸದಸ್ಯರಾದ ಯೋಗೀಶ್ ದೇವಾಡಿಗ ಮತ್ತು ಕ್ಷೇತ್ರದ ಅಧ್ಯಕ್ಷರಾದ ಕೇಶವ ದೇವಾಡಿಗ ಮತ್ತು ನಾಗೇಶ ದೇವಾಡಿಗ, ಗುರುಪ್ರಸಾದ್ ರಾವ್, ಸಂಜೀವ ದೇವಾಡಿಗ, ವೆಂಕಪ್ಪ ಮೊಲಿ, ಪಾರ್ಶ್ವನಾಥ ವರ್ಮ, ಸುಧೀರ್ ಪುರಾಣಿಕ್, ಚಂದ್ರಶೇಖರ ಶೆಟ್ಟಿ, ಯಂ. ಎಸ್. ನಾಯಕ್ ಮೊದಲಾದವರು ಹಾಜರಿದ್ದರು.
ಈಗಾಗಲೇ ಎಪ್ರಿಲ್ ೨೮ರಿಂದ ಮೇ ೨೧ರವರೆಗೆ ಕಾರ್ಕಳದ ಸಿಗಡಿಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿತ್ತು. ಕಾರ್ಕಳದಲ್ಲಿ ೧೮೦ ಕೆರೆಗಳು ಹೂಳಿನಿಂದ ತುಂಬಿದ್ದು ಶಾಸಕರ ಮುತುವರ್ಜಿಯಲ್ಲಿ ಅನೇಕ ಕೆರೆಗಳ ಹೂಳೆತ್ತುವ ಕೆಲಸವು ಸಿಗಡಿ ಕೆರೆಯ ಪ್ರೇರೇಪಣೆಯಿಂದ ಆರಂಭಗೊಂಡಿದೆ. ಆ ಕೆರೆಗಳಲ್ಲಿ ಅತೀ ಕಾರ್ಣಿಕವುಳ್ಳ ಕೆರೆಯಾದ ಕಲ್ಲಮ್ಮ ಕೆರೆಯ ಹೂಳೆತ್ತುವ ಮಹತ್ವದ ಕೆಲಸವು ಇಂದು ಆರಂಭಗೊಂಡಿದೆ. ಈ ಕೆರೆಗೆ ಅಂದಾಜು ಒಂದು ಸಾವಿರ ವರ್ಷಗಳ ಇತಿಹಾಸವಿದ್ದು ಭೈರವರಸರ ಕಾಲದ ಕೆರೆಯಾಗಿದೆ.

Related posts

Leave a Reply