Header Ads
Header Ads
Breaking News

ಕಾರ್ಕಳದಲ್ಲಿ ಹೋಬಳಿ ಮಟ್ಟದ ಜನ ಸ್ಪಂದನ ಸಭೆ, ಸಚಿವ ಪ್ರಮೋದ್ ಮಧ್ವರಾಜ್‌ರಿಂದ ಚಾಲನೆ

ಹೋಬಳಿ ಮಟ್ಟದ ಜನ ಸ್ಪಂದನ ಸಭೆ ಕಾರ್ಕಳ ಮಂಜುನಾಥಪ್ಪ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ದೀಪ ಬೆಳಗಿಸಿ ಉದ್ಘಾಟಿಸಿರು.
ಬಳಿಕ ಮಾತಾನಾಡಿದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಸರಕಾರ ಹಲವಾರು ಜನಪರ ಕಾರ್ಯಕ್ರಮವನ್ನು ಮಾಡಿದೆ. ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ಒಂದು ರೂಪಾಯಿಯ ಹಾಗೆ ಬಿಪಿಎಲ್ ಕಾರ್ಡ್‌ಗಾರರಿಗೆ ೭೦ ಕೆ.ಜಿ. ಅಕ್ಕಿ, ಅದಲ್ಲದೆ ಬಡವರ ಮನೆಗೆ ಉಚಿತ ವಿದ್ಯುತ್ ಇಂತಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳು ನಮಗೆ ಸ್ಪಷ್ಟ ಸೂಚನೆ ನೀಡಿದಂತೆ ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಬಗೆಹರಿಸಬೇಕು ಅದಕ್ಕೋಸ್ಕರ ನಾವು ಇಂತಹ ಜನ ಸಂಪರ್ಕ ಸಭೆ ಮಾಡುವ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಪುರಸಭೆಯ ವ್ಯಾಪ್ತಿಯ ಕೆಲವು ವಾರ್ಡುಗಳಲ್ಲಿ ಚುನಾಯಿತ ಪುರಸಭೆಗಳ ಗಮನಕ್ಕೆ ತಾರದೆ ಅಧಿಕಾರಿಗಳು ಕೆಲವರಿಗೆ ಹಕ್ಕು ಪತ್ರಗಳನ್ನು ನೀಡಿದ್ದನ್ನು ವಿರೋಧಿಸಿ ಕಾರ್ಕಳ ಪುರಸಭೆ ಸದಸ್ಯ ಸುಭದ್ ರಾವ್ ಉಸ್ತುವಾರಿ ಮಂತ್ರಿಗಳ ಎದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಇಂತಹ ತಪ್ಪು ಮುಂದೆ ನಡೆಯದಂತೆ ಮನವಿ ಸಲ್ಲಿಸಿದರು.

Related posts

Leave a Reply