Header Ads
Breaking News

ಕಾರ್ಕಳದಲ್ಲಿ 200 ವರ್ಷಗಳಷ್ಟು ಹಳೆಯದಾದ ಆಲದ ಮರ ಧರಾಶಾಹಿ : ರಸ್ತೆ ಸಂಚಾರ ಸ್ಥಗಿತ

ಸುಮಾರು 200 ವರ್ಷಗಳಷ್ಟು ಹಳೆಯದಾದ ಆಲದಮರವೊಂದು ಧರಾಶಾಹಿಯಾದ ಘಟನೆ ಕಾರ್ಕಳದ ಆನೆಕೆರೆ ವೃತ್ತದ ಬಳಿ ನಡೆದಿದೆ. ಇಂದು ಮುಂಜಾನೆ ವೇಳೆ ಬೃಹತ್ ಮರ ಉರುಳಿದ್ದು, ವಾಹನ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮರದ ಬುಡದಲ್ಲಿ ಅಂಗಡಿಗಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಈರೀತಿ ಬೀಳುವ ಸ್ಥಿತಿಯಲ್ಲಿ ಹಲವು ಮರಗಳಿದ್ದರೂ ಕಾರ್ಕಳ ಪುರಸಭೆ ಕಣ್ಣು ಮುಚ್ಚಿ ಕುಳಿತಿದೆ. ಇನ್ನಾದರೂ ಪುರಸಭೆ ಎಚ್ಚೆತ್ತು ಇಂಥ ಮರಗಳನ್ನು ತೆರವುಗೊಳಿಸಿ ಸಾರ್ವಜನಿಕರ ಆಸ್ತಿಪಾಸ್ತಿಹಾಗೂ ಜೀವಹಾನಿಯನ್ನು ತಡೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *