Header Ads
Breaking News

ಕಾರ್ಕಳದಲ್ಲಿ 63ನೇ ಉರೂಸ್ ಕಾರ್ಯಕ್ರಮ : ಅಬ್ದುಲ್ ಹಮೀದ್ ಮುಸ್ಲಿಯಾರ್‍ರಿಂದ ಚಾಲನೆ

ಕಾರ್ಕಳ ತಾಲೂಕಿನ ಸಾಣೂರ್‍ನ ಶಾಂಭವಿ ನದಿತಟದಲ್ಲಿ ಅಂತ್ಯ ವಿಶ್ರಮ ಗೊಂಡಿರುವ ಅಸಂಖ್ಯಾತ ಜನರ ಕಷ್ಟಕಾರ್ಪಣ್ಯಗಳಿಗೆ ತಮ್ಮ ದಿವ್ಯ ಶಕ್ತಿಯಿಂದ ಪರಿಹಾರ ನೀಡುತ್ತಿರುವ ಹಾಜ್ರತ್ ಸೈಯದ್ ಶಾಹುಲ್ ಹಮೀದ್ ಒಲಿಯಲ್ಲ ರವರ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 63ನೇ ಉರುಸ್ ಕಾರ್ಯಕ್ರಮವು 20ರಂದು ಶೈಖುನಾ ಝನೂಲ್ ಉಲೂಮ ಅಬ್ದುಲ್ ಹಮೀದ್ಮುಸ್ಲಿಯಾರ್ ಮಾಣಿ ಇವರಿಂದ ಚಾಲನೆ ದೊರಕಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ವಲಿಯಲ್ಲ ರವರ ಸಮಾಧಿ ಬಳಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ನಂತರ ಹಮೀದ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು.

ಈ ಸಂದರ್ಭ ಅಬು ಸುಫ್ಯಾನ್ ಇಬ್ರಾಹಿಂ ಮದನಿ, ಅಧ್ಯಕ್ಷರಾದ ಮೊಹಮ್ಮದ್ ಆಸೀಫ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *