Header Ads
Header Ads
Breaking News

ಕಾರ್ಕಳದಲ್ಲಿ 70ನೇ ಗಣರಾಜ್ಯೋತ್ಸವ ಸಂಭ್ರಮ:ದಂಡಾಧಿಕಾರಿ ಮಹಮ್ಮದ್ ಇಸಾಕ್‌ರಿಂದ ಧ್ವಜಾರೋಹಣ

ಕಾರ್ಕಳದಲ್ಲೂ 70ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಕಾರ್ಕಳದ ದಂಡಾಧಿಕಾರಿ ಮಹಮ್ಮದ್ ಇಸಾಕ್ ಅವರು ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು. ಕಾರ್ಕಳ ಶಾಸಕರಾದ ವಿ. ಸುನೀಲ್ ಕುಮಾರ್ ಹಾಗೂ ಕಾರ್ಕಳ ದಂಡಾಧಿಕಾರಿ ವಂದನೆಯನ್ನು ಸ್ವೀಕರಿಸಿದರು ನಂತರ ಪ್ರೇಡ್ ಕಮಾಂಡರ್ ಕಾರ್ಕಳ ನಗರ ಠಾಣಾಧಿಕಾರಿ ನಂಜ ನಾಯ್ಕ್ ನೇತೃತ್ವದಲ್ಲಿ ಪಥ ಸಂಚಲನ ಜರಗಿತು. ಈ ಸಂದರ್ಭದಲ್ಲಿ ಮಾತನಾಡಿದ ದಂಡಾಧಿಕಾರಿ ಈ ಸಂವಿಧಾನ ರಚಿಸಲು 2 ವರ್ಷ 11ತಿಂಗಳು 18 ದಿನಗಳು ಬೇಕಾದವು ಭಾರತದ ಸಂವಿಧಾನ ವಿದ್ಯುತ್ ಆಗಿ ಜಾರಿಗೆ ಬಂದ ದಿನವೇ ಗಣರಾಜ್ಯೋತ್ಸವವಾಗಿದೆ. ಕೆಲವೊಂದು ಭಾರತದ ದುಷ್ಟ ಶಕ್ತಿಗಳು ಕೋಮುವಾದ ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ತುಂಬಾ ಬೇಸರ ಸಂಗತಿಯಾಗಿದೆ ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಕಾರ್ಕಳ ವೃತ್ತ ನೀರಿಕ್ಷರು ಹಾಗೂ ಜನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Related posts

Leave a Reply