Breaking News

ಕಾರ್ಕಳದಿಂದ ಕುಕ್ಕಂದೂರಿಗೆ ಬಂದ ಬಾರ್, ಗ್ರಾಮದ ಜನರಿಂದ ಮದ್ಯದಂಗಡಿಗೆ ವಿರೋಧ

ಕಾರ್ಕಳ ಜೋಡು ರಸ್ತೆಯಲ್ಲಿದ್ದ ರಂಜಿತ್ ಬಾರ್ ಎಂಬ ಮದ್ಯದಂಗಡಿಯೊಂದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಕಾರಣ ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮುಚ್ಚುವ ಭರದಲ್ಲಿ ಬಾರ್ ಮಾಲಿಕ ಕಾರ್ಕಳ ತಾಲೂಕಿನ ಕುಕ್ಕಂದೂರು ಗ್ರಾಮದ ಅಯ್ಯಪ್ಪ ನಗರದಲ್ಲಿ ಸ್ಥಳಾಂತರಕ್ಕೆ ಯತ್ನಿಸಿರುವುದನ್ನು ಖಂಡಿಸಿ ಕಾರ್ಕಳ ಅಯ್ಯಪ್ಪ ನಗರದ ಗ್ರಾಮಸ್ಥರು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕಾರ್ಕಳದಲ್ಲಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದ ಹಿನ್ನಲೆಯಲ್ಲಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಯ್ಯಪ್ಪ ನಗರದ ಗ್ರಾಮಸ್ಥೆ ಶಶಿಕಲಾ ಮಾತನಾಡಿ ಕಳೆದ ಹಲವು ವರ್ಷಗಳಿಂದ ಯಾವುದೇ ಮದ್ಯದಂಗಡಿಯಿಲ್ಲದೆ ನಾವು ನೆಮ್ಮದಿಯಿಂದ ಇದ್ದೆವು. ಇದೀಗ ರಂಜಿತ್ ಬಾರ್ ತೆರೆಯುವುದರಿಂದ ಅನೇಕ ಸಮಸ್ಯೆ ಆರಂಭವಾಗಲಿದೆ. ಶಾಲೆ, ದೇವಸ್ಥಾನ, ಬಸ್ಸು ನಿಲ್ದಾಣವಿರುವ ಸ್ಥಳದಲ್ಲಿ ಬಾರ್ ಆರಂಭವಾಗಿದ್ದು ಗ್ರಾಮದಲ್ಲಿರುವ ಹಲವರು ಕುಡಿತದ ಚಟಕ್ಕೆ ಬಲಿಯಾಗಿದ್ದಾರೆ, ಮನೆಯ ಗಂಡಸರು ಹಣವೆಲ್ಲ ಬಾರ್‌ಗೆ ಸುರಿಯುತ್ತಿರುವುದರಿಂದ ಸಂಸಾರ ಕಷ್ಟ ಸಾಧ್ಯ, ಬಸ್ಸು ನಿಲ್ದಾಣದಲ್ಲಿ ಕುಡುಕರ ಕಾಟದಿಂದ ಮಹಿಳೆಯರು, ಯುವತಿಯರು ಓಡಾಟಕ್ಕೆ ಸಂಕಷ್ಟ ಪಡುವಂತಾಗಿದೆ. ಆದ್ದರಿಂದ ಅಯ್ಯಪ್ಪ ನಗರಕ್ಕೆ ಬಾರ್ ಬೇಕಿಲ್ಲ ಅದನ್ನು ಮುಚ್ಚಬೇಕು. ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಬಾರ್ ಮುಚ್ಚಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

Related posts

Leave a Reply