Header Ads
Header Ads
Breaking News

ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಚರ್ಚ್: ವಾರ್ಷಿಕ ಮಹೋತ್ಸವದ ಪಂಚ ದಿನಗಳ ಪ್ರಾರ್ಥನಾ ಮಹೂರ್ತಕ್ಕೆ ಚಾಲನೆ.

ಕಾರ್ಕಳ: ಕರ್ನಾಟದ 2ನೇ ಮತ್ತು ದೇಶದ 22ನೇ ಹಾಗೂ ಜಗತ್ತಿನ 1742ನೇ ಮೈನರ್ ಬಸಿಲಿಕಾ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ಅತ್ತೂರು ಸಂತ ಲಾರೆನ್ಸ್ ಬಸಲಿಕಾದ ವಾರ್ಷಿಕ ಮಹೋತ್ಸವದ ವನದಿನಗಳ ಪ್ರಾರ್ಥನಾ ಮಹೂರ್ತಕ್ಕೆ ಚಾಲನೆ ದೊರಕಿತು.ಪ್ರಾರ್ಥನಾ ಮುಹೂರ್ತಕ್ಕೆ ಕಾರ್ಕಳ ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲುಇ ಮಾತನಾಡಿದ ಅವರು ಅತ್ತೂರು ಪುಣ್ಯ ಕ್ಷೇತ್ರವು ಕಳೆದ ಕೆಲ ವರ್ಷಗಳಿಂದ ಬಸಿಲಿಕಾ ಧಾರ್ಮಿಕ ನೆಲೆಗಟ್ಟಿನೊಂದಿಗೆ ವಿಶ್ವವಿಖ್ಯಾತ ಪಡೆದಿದೆ. ಆ ಮೂಲಕ ವಿಶ್ವದ ಆಸ್ತಿಕ ಬಾಂಧವರನ್ನು ತನ್ನೆಡೆಗೆ ಸೆಳೆದುಕೊಳ್ಳವ ಶಕ್ತಿವಾಗಿದೆ. ಸಂತ ಲಾರೆನ್ಸ್ ಅವರ ಪವಾಡವೇ ಇದಕ್ಕೆ ಮೂಲ ಕಾರಣವಾಗಿದ್ದು, ಅಸಂಖ್ಯಾತ ಭಕ್ತಾಧಿಗಳಿಗೆ ಈ ಶೃದ್ಧಾಕೇಂದ್ರದಿಂದ ತಮ್ಮ ದುಖ, ದುಮ್ಮನುಗಳಿಗೆ ಪರಿಹಾರದೊರೆಯುವಂತಾಗಿದೆ. ವಾರ್ಷಿಕೋತ್ಸವವು ಸರ್ವರಿಗೆ ಶಾಂತಿ, ನೆಮ್ಮದಿ ಕರುಣಿಸಲಿ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ ಮಾತನಾಡಿ, ಸಂತ ಲಾರೆನ್ಸ್‌ರವರು ಸಮಾಜಕ್ಕೆ ನೀಡಿದ ಭಾವ್ಯಕ್ಯೆ ಸಂದೇಶ ಮುಂದಿನ ಪೀಳಿಗೆ ಮಾದರಿಯಾಗಿ ಉಳಿಯಲಿದೆ. ಜಾತಿ, ಧರ್ಮ, ವರ್ಣ, ಲಿಂಗ, ಬಾಷೆ ಇವೆಲ್ಲವನ್ನು ಒಂದೆಡೆಯಲ್ಲಿ ಲೀನವಾಗುವ ಶಕ್ತಿ ಈ ಪುಣ್ಯ ಭೂಮಿಗೆ ಇದೆ. ಈ ಮೂಲಕ ಶಾಂತಿ ನೆಲೆಗೊಳ್ಳಲು ಸಾಧ್ಯವಾಗಿದೆ ಎಂದರು.
ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬಿತಾ, ತಾಲೂಕು ಪಂಚಾಯತ್ ಸದಸ್ಯ ಹರಿಶ್ಚಂದ್ರ, ಜಿಲ್ಲಾ ಧರ್ಮಗುರು ಜಾರ್ಜ್ ಡಿಸೋಜಾ, ಸಹಾಯಕ ಧರ್ಮಗುರು ಜೆನ್ಸಿಲ್ ಆಳ್ವ, ಪಂಚಾಯತ್ ಸದಸ್ಯೆ ರೇಷ್ಮಾ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಂತೋನಿ ಡಿಸೋಜಾ, ಜಾನ್ ಡಿಸಿಲ್ವ, ರಿಚ್ಚರ್ಡ್ ಪಿಂಟೋ, ಲೀನಾ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply