Header Ads
Header Ads
Breaking News

ಕಾರ್ಕಳದ ಎಂಜಿನಿಯರ್‌ಗಳಿಗೆ ಅವಮಾನಿಸಲಾಗಿದೆ : ದಿವಾಕರ ಶೆಟ್ಟಿ ಆರೋಪ

ಭೂ ಪರಿವರ್ತಿತ ಜಮೀನಿಗೆ ಏಕ ವಿನ್ಯಾಸ ನಕ್ಷೆ ಅನುಮೋದನೆಯನ್ನು ನೋಂದಾಯಿತ ಖಾಸಗಿ ಎಂಜಿನಿಯರ್‌ಗಳಿಂದ ಮಾಡಿಸುವ ಬಗ್ಗೆ ಕಾರ್ಕಳ ತಾಲೂಕು ವ್ಯಾಪ್ತಿಯ ಒಬ್ಬ ಎಂಜಿನಿಯರಿಗೆ ಅವಕಾಶವನ್ನು ನೀಡಲಿಲ್ಲ. ಕೇವಲ ಉಡುಪಿ ಮತ್ತು ಕುಂದಾಪುರ ವ್ಯಾಪ್ತಿಯ ಎಂಜಿನಿಯರ್‌ಗಳಿಗೆ ಮಾತ್ರ ಅವಕಾಶ ನೀಡಿದ್ದು, ಕಾರ್ಕಳದ ಎಲ್ಲಾ ಎಂಜಿನಿಯರ್‌ಗಳಿಗೆ ಅವಮಾನಿಸಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಸಭೆಯಲ್ಲಿ ನೋಂದಾಣಿಸಿದ ಸುಮಾರು30 ಜನ ಅರ್ಹ ಸಿವಿಲ್ ಇಂಜಿನಿಯರ್‍ಸ್ ಇದ್ದು, ಈ ಬಗ್ಗೆ ಜಿ.ಪಂ. ಅರ್ಜಿ ಆಹ್ವಾನಿಸಿದ್ದು, ಜಿ.ಪಂ. ಅಭಿವೃದ್ಧಿ ಶಾಖೆಗೆ ಅರ್ಜಿಯನ್ನು ಸಲ್ಲಿಸಿದ್ದೇವೆ. ಆದರೆ ಇದರ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಬಗ್ಗೆ ಜಿ.ಪಂ. ಅಭಿವೃದ್ಧಿ ಶಾಖೆಯಿಂದ ಕಾರ್‍ಯಾದೇಶ ಹೊರಡಿಸಿದೆ. ಇದರಿಂದ ಕಾರ್ಕಳದ ಜನತೆಗೆ ದೂರದ ಉಡುಪಿ, ಕುಂದಾಪುರದ ಎಂಜಿನಿಯರ್‌ಗಳಿಗೆ ಮೊರೆ ಹೋಗಬೇಕಾದ ಗೊಂದಲದ ವಾತಾವರಣ ಸೃಷ್ಟಿ ಮಾಡಿದಂತಾಗಿದೆ. ಕಾರ್ಕಳದ ಪುರಸಭೆಯಲ್ಲಿ ನೋಂದಾಯಿತ ಎಲ್ಲಾ ಅರ್ಹ ಖಾಸಗಿ ಎಂಜಿನಿಯರ್‌ಗಳಿಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಕಳ ತಾಲೂಕಿನಾದ್ಯಂತ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದ್ದು, ಸುಮಾರು ೬ ತಿಂಗಳಿನಿಂದ ಎಲ್ಲಾ ಸಿವಿಲ್ ಕಾಮಗಾರಿಗಳು ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ದೇಶದ ಎರಡನೇ ಅತೀ ದೊಡ್ಡ ಉದ್ಯಮ ಅತಂತ್ರವಾಗಿದೆ. ಎಲ್ಲಾ ರೀತಿಯ ಅಭಿವೃದ್ಧಿಗಳು ಕುಂಠಿತಗೊಂಡಿದ್ದು, ಸಾಮಾಜಿಕ ಜನಜೀವನ ಅಸ್ತವ್ಯಸ್ತಗೊಂಡಂತಿದೆ. ಮರಳು ಮಾಫಿಯಾ ಮತ್ತು ಅಽಕಾರಿಗಳ ಕಚ್ಚಾಟದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ. ಸಮಸ್ಯೆ ಮುಂದುವರಿದ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಕಾರ್ಯದರ್ಶಿ ರಾಜೇಶ್ ಪದಾಧಿಕಾರಿಗಳಾದ ಪ್ರಶಾಂತ್ ರೈ, ಶಶಿಕಾಂತ್ ಶೆಟ್ಟಿ, ಮಂಜುನಾಥ ಹೆಗ್ಡೆ, ಹರೀಶ್ ಅಂಚನ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply