Header Ads
Breaking News

ಕಾರ್ಕಳದ ಕಡ್ತಲ ಅಣೆಕಟ್ಟಿನ ಹಲಗೆ ಎಬ್ಬಿಸಿ ನೀರು ಹೊರಕ್ಕೆ : ನೀರು ತುಂಬಲು ಶಾಸಕರ ಸತತ ಪ್ರಯತ್ನ

ಕಡ್ತಲ: ಯರ್ಲಪಾಡಿ ಹಾಗೂ ಕಡ್ತಲ ಗ್ರಾಮಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬಹಳಷ್ಟು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ಕಡ್ತಲ ಹಾಗೂ ಯರ್ಲಪಾಡಿ ಗ್ರಾಮ ಪಂಚಾಯತ್‍ಗಳ ಮದ್ಯೆ ಹರಿಯುವ ಸ್ವರ್ಣ ನದಿ ಬಹಳಷ್ಟು ದೊಡ್ಡದಾದ ನದಿ. ಪಶ್ಚಿಮ ಘಟ್ಟದಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಈ ನದಿಯಲ್ಲಿ ಪ್ರವಾಹದಷ್ಟು ನೀರನ್ನು ಸಮುದ್ರಕ್ಕೆ ಕೊಂಡೊಯ್ಯುತ್ತದೆ. ಇದೀಗ ಸುಮಾರು ಎಂಟು ಅಡಿಯಷ್ಟು ನೀರನ್ನು ಅಣೆಕಟ್ಟಿನಿಂದ ಖಾಲಿ ಮಾಡಿಸುವ ಪ್ರಯತ್ನಗಳು ನಡೆಯುತ್ತಿದೆ.

ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳನ್ನು ಸಂಪರ್ಕದ ನಿಟ್ಟಿನಲ್ಲಿ ಒಗ್ಗೂಡಿಸಬೇಕೆಂಬ ಕಲ್ಪನೆಯನ್ನು ಬಹಳಷ್ಟು ಮಂದಿ ಹೊಂದಿದ್ದರು. ಬಹಳಷ್ಟು ವರ್ಷಗಳ ಕಾಲ ಈ ನಿರೀಕ್ಷೆ ಸಂಪೂರ್ಣವಾಗಿರಲಿಲ್ಲ.
ಕಾರ್ಕಳ ಸಾಸಕ ಸುನಿಲ್ ಕುಮಾರ್‍ರು ಈ ಯೋಜನೆಯನ್ನು ಫಲಪ್ರದವಾಗಿಸಬೇಕೆಂಬ ನಿಟ್ಟಿನಲ್ಲಿ ಯೋಜನೆಯೊಂದನ್ನು ಸಿದ್ದಪಡಿಸಿ ಕಡ್ತಲ ಹಾಗೂ ಯರ್ಲಪಾಡಿ ಊರುಗಳ ಮಧ್ಯೆಯಿರುವ ಸ್ವರ್ಣನದಿಗೆ ಪಟ್ಟಿಬಾವು ಎಂಬಲ್ಲಿ ಸೇತುವೆಯೊಂದನ್ನು ನಿರ್ಮಿಸಿಯೇ ಬಿಟ್ಟಿದ್ದರು. ನದಿಯ ನೀರನ್ನು ತಡೆಗಟ್ಟಿ ಅಂತರ್ ಜಲವನ್ನು ಏರಿಸಬೇಕು ಹಾಗೂ ಬೇಸಿಗೆಯಲ್ಲಿ ಈ ಪರಿಸರದ ಕೃಷಿಕರಿಗೆ ನೀರು ನೀಡಬೇಕೆಂಬ ಉತ್ಕಟವಾದ ಇಚ್ಛೆಯಿಂದ ಆ ಸೇತುವೆಗೆ ಅಡ್ಡಲಾಗಿ ಅಣೆಕಟ್ಟನ್ನು ಕೂಡಾ ಮಂಜೂರು ಮಾಡಿದ್ದರು. ಕಾಮಗಾರಿ ಸಂಪೂರ್ಣಗೊಂಡು ವರ್ಷ ಕಳೆದಿದೆ. ಇಲ್ಲಿನ ಅಣೆಕಟ್ಟಿನಲ್ಲಿ ಬಹಳಷ್ಟು ನೀರು ತುಂಬಿದೆ.ಈ ಸೇತುವೆ ಕಾಮಗಾರಿ ಆರಂಭದ ದಿನಗಳಲ್ಲಿ ಕಾಮಗಾರಿ ಮಾಡಲು ಈ ಪರಿಸರದಲ್ಲಿ ತಂದು ಹಾಕಿದ್ದ ಕಬ್ಬಿಣದ ರಾಡ್‍ಗಳನ್ನು ಕಳವು ಮಾಡಲಾಗಿತ್ತು. ಬಳಿಕದ ದಿನಗಳಲ್ಲಿ ಪಟ್ಟಿಬಾವು ಸೇತುವೆ ಕಾಮಗಾರಿ ಕಳಪೆಯಾದುದಲ್ಲದೆ ಕಾಮಗಾರಿಯೂ ಬಹಳ ನಿಧಾನಗತಿಯಾಗಿತ್ತು. ಇದೀಗ ಈ ಘಟನೆ ನಡೆದಿದೆ.

Related posts

Leave a Reply

Your email address will not be published. Required fields are marked *