Header Ads
Header Ads
Breaking News

ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗೆ ಎನ್‍ಎಬಿಎಚ್ ಮಾನ್ಯತೆ

ಕಾರ್ಕಳ: ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯು 24 ಸೆಪ್ಟೆಂಬರ್ 2019ರಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ(ಎನ್‍ಎಬಿಎಚ್)ದ ಪೂರ್ವ ಪ್ರವೇಶ ಮಟ್ಟದ ಮಾನ್ಯತೆಯು, ಭಾರತದ ಗುಣಮಟ್ಟದ ಮಂಡಳಿಯಿಂದ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಪೂರ್ವ ಪ್ರವೇಶ ಮಟ್ಟದ ಮಾನ್ಯತೆಯನ್ನು ಪಡೆದಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್, ಉಪಕುಲಪತಿಗಳಾದ ಡಾ. ಎಚ್ ವಿನೋದ್ ಭಟ್ ಅವರು ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಕೀರ್ತಿನಾಥ ಬಲ್ಲಾಳ್ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಮಾಹೆ ಮಣಿಪಾಲದ ಸಹ ಉಪಕುಲಪತಿದ್ವಯರುಗಳಾದ ಡಾ. ಪೂರ್ಣಿಮಾ ಬಾಳಿಗಾ ಮತ್ತು ಡಾ ಪಿ ಎಲ್ ಎನ್ ಜಿ ರಾವ್, ಕುಲಸಚಿವರಾದ ಡಾ. ನಾರಾಯಣ ಸಭಾಹಿತ, ಕೆಎಂಸಿ ಮಣಿಪಾಲದ ಡೀನ್ ಡಾ. ಶರತ್ ಕುಮಾರ್ ರಾವ್, ಕಸ್ತೊರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಸಿ ಜಿ ಮುತ್ತಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಉಪಸ್ಥಿತರಿದ್ದರು. ಈ ಪ್ರಮಾಣಪತ್ರದೊಂದಿಗೆ ಕಾರ್ಕಳದ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯು ಈ ಮಾನ್ಯತೆ ಪಡೆದ ಕಾರ್ಕಳದ ಮೊದಲ ಆಸ್ಪತ್ರೆಯಾಗಿದೆ.

ರೋಗಿಗಳ ಆರೈಕೆ, ರೋಗಿಗಳ ಶಿಕ್ಷಣ ಮತ್ತು ಅರಿವು, ಶುಶ್ರೂಷಾ ಆರೈಕೆಯ ಗುಣಮಟ್ಟ, ಸಂವಹನ ಮತ್ತು ಮಾರ್ಗದರ್ಶನ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳಂತಹ ಆಸ್ಪತ್ರೆಯ ಎಲ್ಲಾ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸೌಲಭ್ಯಗಳಿಗೆ ಈ ಮಾನ್ಯತೆ ನೀಡಲಾಗುತ್ತದೆ. ಆರೋಗ್ಯ ಪ್ರಮಾಣೀಕರಣ, ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸಕ ಶುಶ್ರೂಷಾ ಆರೈಕೆಯ ವಿಷಯದಲ್ಲಿ ರೋಗಿಗಳ ಸಮಗ್ರ ಆರೈಕೆಯನ್ನು ಒದಗಿಸುವ ಉದ್ದೇಶದಿಂದ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿಯು ಈ ಪ್ರಮಾಣೀಕರಣ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ ಮತ್ತು ಸುರಕ್ಷಿತವಾಗಿರಿಸಿದೆ. ಈ ಪ್ರಮಾಣಪತ್ರವು ಆಸ್ಪತ್ರೆಗೆ ಮತ್ತು ಸಮುದಾಯಕ್ಕೆ ಬರುವ ಎಲ್ಲಾ ರೋಗಿಗಳಿಗೆ ಸಹಾನುಭೂತಿ ಮತ್ತು ಸೌಕರ್ಯದೊಂದಿಗೆ ಸುರಕ್ಷಿತ, ಸಮರ್ಥ ಮತ್ತು ನೈತಿಕ ಅಭ್ಯಾಸವನ್ನು ಖಚಿತಪಡಿಸುತ್ತದೆ.

ಈಗ ಕಾರ್ಕಳದ ಆಸ್ಪತ್ರೆಯಲ್ಲಿ ಹೊಸ ಹೊರರೋಗಿ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ಸಂಕೀರ್ಣದ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿವೆ. ಅದು ಪೂರ್ಣಗೊಂಡ ನಂತರ ಆಸ್ಪತ್ರೆಯು ಪೂರ್ಣ ಪ್ರಮಾಣದ ಎನ್‍ಎಬಿಎಚ್ ಮಾನ್ಯತೆಯನ್ನು ಪಡೆಯುವ ಭರವಸೆ ಹೊಂದಿದೆ.

Related posts

Leave a Reply

Your email address will not be published. Required fields are marked *