Breaking News

ಕಾರ್ಕಳದ ಪುಲ್ಕೇರಿ ಜಲ್ವಾ ಎ ನೂರ್ ಮದ್ರಸ, ನೂರಾರು ಭಕ್ತರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ

ಕಾರ್ಕಳದ ಪುಲ್ಕೇರಿ ಜಲ್ವಾ ಎ ನೂರ್ ಮದ್ರಸದಲ್ಲಿ ನೂರಾರು ಭಕ್ತರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂಬಂಧ ಮಾತನಾಡಿದ ನಾಸೀರ್ ಶೇಕ್, ನಾವು ಕೆಲವು ದಿನಗಳಿಂದ ನೀರಿಗಾಗಿ ಹಾಹಾಕಾರ ಹಾಕುತ್ತಾ ಇದ್ದೇವೆ. ನಮಗೆ ಈ ಪರಿಸ್ಥಿತಿ ಯಾಕೆ ಬಂದಿದೆ ಅಂದರೆ ನಾವು ತಮ್ಮಳೊಗೆ ಕಚ್ಚಾಡಿಕೊಂಡಿರುತ್ತೇವೆ. ನಾವು ಇನ್ನೊಬ್ಬರ ರಕ್ತವನ್ನು ಕುಡಿಯುತ್ತೇವೆ. ನಾವು ದೇವರನ್ನು ಸಂಪೂರ್ಣವಾಗಿ ಮರೆತ್ತಿದ್ದೇವೆ. ಇದರಿಂದಾಗಿ ನಿಸರ್ಗ ಕೋಪಗೊಂಡು ಮಳೆಯೆಂಬ ಜೀವ ಜಲವನ್ನು ತಡೆಯಾಗಿದೆ. ಆದರಿಂದ ನಾವು ಸ್ವಚ್ಛ ಮನಸ್ಸಿನಿಂದ ಮಳೆಗಾಗಿ ಪ್ರಾರ್ಥಿಸಿ ನಾವು ನಮ್ಮ ಪಾಪದ ಪ್ರಾಯಶ್ಚಿತ್ತ ಮಾಡಬೇಕೆಂದು ತಿಳಿಸಿದರು. ಈ ವೇಳೆ ಮಸೀದಿಯ ಧರ್ಮಗುರುಗಳಾದ ಸೈಯದ್ ರಾಝ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ವಿಶೇಷ ಎಂದರೆ ಪ್ರಾರ್ಥನೆಯಾದ ಒಂದೆರಡು ಘಂಟೆಗಳಲ್ಲಿ ಕಾರ್ಕಳದ ಸುತ್ತುಮುತ್ತಲಿನಲ್ಲಿ ಧಾರಾಕಾರ ಮಳೆಯಾಗಿದೆ.

Related posts

Leave a Reply