Header Ads
Header Ads
Header Ads
Breaking News

ಕಾರ್ಕಳದ ಪೆರ್ವಾಜೆ ಶಾಲೆಗೆ ಸ್ವಚ್ಚ ವಿದ್ಯಾಲಯ ಪ್ರಶಸ್ತಿ ಜನರು ಸಮಾಜದ ಆಸ್ತಿಯಾಗಬೇಕಾದರೆ ಶಿಕ್ಷಣದ ಅರಿವು ಮುಖ್ಯ ಅಭಿನಂದನಾ ಕಾರ್ಯಕ್ರಮದಲ್ಲಿ ಹೆಚ್. ಗೋಪಾಲಭಂಡಾರಿ ಹೇಳಿಕೆ

ಕಾರ್ಕಳ: ದೇಶದ ಜನ ಸಂಖ್ಯೆ 130 ಕೋಟಿಗೆ ತಲುಪಿದೆ. ಜನರು ಸಮಾಜದ ಆಸ್ತಿಯಾಗಬೇಕಾದರೆ ಶಿಕ್ಷಣದ ಅರಿವು ಮುಖ್ಯವಾಗಿದೆ. ತನ್ಮೂಲಕ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವೆಂದು ಮಾಜಿಶಾಸಕ ಹೆಚ್.ಗೋಪಾಲಭಂಡಾರಿ ಹೇಳಿದರು.

ಭಾರತ ಸರಕಾರದಿಂದ 2016-17 ನೇ ಸಾಲಿನ ರಾಷ್ಟ್ರ ಮಟ್ಟದ “ಸ್ವಚ್ಛ ವಿದ್ಯಾಲಯ” ಪ್ರಶಸ್ತಿಯನ್ನು ಪಡೆದ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿನ ಮುಖ್ಯ ಶಿಕ್ಷಕಿ ಕೆ.ಹರ್ಷಿಣಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳನ್ನು ಗೌರವಿಸಿ ಶಾಲಾ ಹೊರಾಂಗಣದಲ್ಲಿ ಆಯೋಜಿಸಿ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಹಾಗೂ ವಿಧಾನ ಸಭಾ ವಿರೋಧಪಕ್ಷದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ, ನಿಯಮ, ಕಾನೂನುಗಳಿಂದ ಎಲ್ಲಾ ಸಂದರ್ಭದಲ್ಲಿ ಯಶಸ್ಸು ಪಡೆಯಲು ಅಸಾಧ್ಯ. ಆದರೆ ಸಂಪ್ರದಾಯಿಕ ನಡುವಳಿಕೆಯಿಂದ ಕಾನೂನು-ನಿಯಮಗಳನ್ನು ಮೀರಿ ಯಶಸ್ಸು ಸಾಧಿಸಬಹುದು ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ರೋಟರಿ ಕಲಬ್ ಅಧ್ಯಕ್ಷ ಡಾ. ಎಸ್.ಕೆ.ಮಹಾದೇವ ಗೌಡ ಸಾಂದರ್ಭಿಕವಾಗಿ ಮಾತನಾಡಿ ಅಭಿನಂದಿಸಿದರು. ಯುವರಾಜ್ ಜೈನ್ ಅಭಿನಂದನಾ ಭಾಷಣ ಮಾಡಿದರು.
ಉದ್ಯಮಿ ಹಾಗೂ ದಾನಿ ಶ್ರೀನಾಥ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

Related posts

Leave a Reply