Header Ads
Header Ads
Breaking News

ಕಾರ್ಕಳದ ಪ್ರಮುಖ ರಸ್ತೆಗೆ ಅಭಿವೃದ್ಧಿಗೆ ಅನುದಾನ ಮಂಜೂರು : ಗ್ರಾಮೀಣ ಮತ್ತು ಮುಖ್ಯ ರಸ್ತೆಗಳಿಗೆ 15.50 ಕೋಟಿ ರೂ. ಬಿಡುಗಡೆ

ಕಾರ್ಕಳ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನದ ಹಿನ್ನಲೆಯಲ್ಲಿ ಗ್ರಾಮೀಣ ಹಾಗೂ ಮುಖ್ಯ ರಸ್ತೆಗಳಿಗೆ 15.50 ಕೋಟಿ ರೂಪಾಯಿ ಮಂಜೂರಾತಿಗೊಂಡಿದೆ ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದ್ದಾರೆ.

ಅವರು ಕಾರ್ಕಳದ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಅಚ್ಚುಕಟ್ಟು ಇಲಾಖೆಯ ವತಿಯಿಂದ ಈ ಅನುದಾನ ಬಿಡುಗಡೆಗೊಂಡಿದೆ. ಈ ವರ್ಷ ಆದ್ಯತೆಯ ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಹಾದು ಹೋಗುವಂತಹ ಎರಡು ರಾಜ್ಯಹೆದ್ದಾರಿಗಳಾದ ಹೊಸ್ಮಾರಿನಿಂದ ಪಳ್ಳಿ ಮುಖೇನ ಹಾದು ಹೋಗುವಂತಹ ಸುಬ್ರಮಣ್ಯ ಉಡುಪಿ ರಾಜ್ಯ ಹೆದ್ದಾರಿ, ಬೆಳ್ಮಣ್ಣು ಮುಖೇನ ಮುನಿಯಾಲು ಸೀತಾನದಿ ಸಂಪರ್ಕಿಸುವಂತಹ ಪಡುಬಿದ್ರೆ ಚಿಕ್ಕಲ್ ಗುಡ್ಡಾ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಎಣ್ಣೆ ಹೊಳೆ, ನೆಲ್ಲಿಕಾರು ಪಾಜೆಗುಡ್ಡೆ ಹಾಗೂ ಇನ್ನಿತರ ರಾಜ್ಯ ಹೆದ್ದಾರಿಯಲ್ಲಿರುವ ಅಪಾಯಕಾರಿ ತಿರುವುಗಳ ತೆರವು ಹಾಗು ದುರಸ್ತಿ ಪಡಿಸುವ ನಿಟ್ಟಿನಲ್ಲಿ ಮೂರು ಕೋಟಿ ಅನುದಾನವನ್ನು ವಿಶೇಷವಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Related posts

Leave a Reply