Header Ads
Header Ads
Breaking News

ಕಾರ್ಕಳದ ಪ್ರವಾಸಿ ಬಂಗಲೆಗೆ ಎರಡು ಪಕ್ಷದವರಿಂದ ಭೂಮಿ ಪೂಜೆ, ಶಾಸಕರ ವಿರುದ್ಧ ಶಿಷ್ಠಾಚಾರ ಉಲ್ಲಂಘನೆಯ ಆರೋಪ


2016-17ನೇ ಸಾಲಿನ ಬಜೆಟ್ ಅಪೆಂಡಿಕ್ಸ್ ಇ ಯೋಜನೆಯಡಿಯಲ್ಲಿ 150 ಲಕ್ಷ ರೂ. ಯಲ್ಲಿ ಪ್ರವಾಸಿ ಬಂಗಲೆಯ ಹೆಚ್ಚುವರಿ ಕಟ್ಟಡಕ್ಕೆ ಶಂಕು ಸ್ಥಾಪನೆಯನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮರ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಭೂಮಿ ಪೂಜೆ ನೆರವೇರಿಸಿದರು.
ಆ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪುರಸಭಾಧ್ಯಕ್ಷೆ ಅನಿತಾ ಆರ್. ಅಂಚನ್, ಬೋಳ ಪ್ರಭಾಕರ ಕಾಮತ್ ಮುಂತಾದವರು ಹಾಜರಿದ್ದರು. ಈ ಕಾರ್ಯಕ್ರಮವನ್ನು ವಿರೋದಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭಾ ಸದಸ್ಯರು, ಶಾಸಕರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಿಷ್ಟಚಾರ ಉಲ್ಲಂಘನೆ ಮಾಡಿದ್ದರು. ಸ್ಥಳೀಯ ಪುರಸಭಾ ಸದಸ್ಯ ಪ್ರಿಯಾ ಜೈನ್‌ರವರಿಗೂ ತಿಳಿಸದೆ ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಭೂಮಿ ಪೂಜೆ ಮಾಡಿದ್ದಾರೆ. ಅದಕ್ಕೆ ನಮ್ಮ ವಿರೋಧವಿದೆ. ಅದಕೋಸ್ಕರ ನಾವು ನಮ್ಮದೇ ರೀತಿಯಿಂದ ಭೂಮಿ ಪೂಜೆ ಮಾಡುತ್ತೇವೆ ಎಂದು ಪುರಸಭಾ ಸದಸ್ಯ ಶುಭದ ರಾವ್ ಮಾಧ್ಯಮಕ್ಕೆ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಪ್ರತಿಮಾ, ಸುಭಿತ್ ಎನ್. ಆರ್., ಬಿಜೆಪಿ ಪುರಸಭಾ ಸದಸ್ಯ ಶ್ರೀಧರ ದೇವಾಡಿಗ, ಸೀತಾರಾಮ ಹಾಗೂ ಮೊಹಮ್ಮದ್ ಶರೀಫ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply