Header Ads
Header Ads
Breaking News

ಕಾರ್ಕಳದ ಬಂಡಿ ಮಠದಲ್ಲಿ 5ಲಕ್ಷ ವೆಚ್ಚದ ನೀರಿನ ಟ್ಯಾಂಕ್ ನಿರ್ಮಾಣ : ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ಹರಿಯುತ್ತಿರುವ ನೀರು

ಕಾರ್ಕಳ ಪುರಸಭೆಯ ವ್ಯಾಪ್ತಿಯ ಬಂಡಿ ಮಠದಲ್ಲಿ 5ಲಕ್ಷ ವೆಚ್ಚದ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು. ಈ ಟ್ಯಾಂಕಿಗೆ ರಾಮಸಮುದ್ರದಿಂದ ಎಕ್ಸ್‍ಪ್ರೆಸ್ ಲೈನ್ ಮುಖಾಂತರ ನೀರು ತುಂಬಿಸಲಾಗುತ್ತದೆ. ಈ ಟ್ಯಾಂಕಿಯಿಂದ ಕಲ್ಲೊಟ್ಟೆ ಹಂಚಿಕಟ್ಟಿ, ಬಂಗ್ಲೆಗುಡ್ಡೆ, ಕಜೆ, ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಈ ಟ್ಯಾಂಕಿಗೆ ನೀರು ತುಂಬಲು ಸುಮಾರು 6ಗಂಟೆ ವಿದ್ಯುತ್ ಪಂಪು ಚಾಲು ಇಡಬೇಕಾಗುತ್ತದೆ. ಕೆಲವು ದಿನಗಳಿಂದ ಈ ಪಂಪನ್ನು ನಿರ್ವಹಣೆ ಮಾಡುವ ಸಿಬ್ಬಂದಿಯ ನಿರ್ಲಕ್ಷತನದಿಂದ ಟಾಂಕೀಯ ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ ಕೆಲವು ಸಮಯಗಳಿಂದ ಈ ರೀತಿ ಆಗುತ್ತಿರುವುದು ಪುರಸಭೆ ಗಮನಕ್ಕೂ ಬಂದರು ಅಧಿಕಾರಿಗಳು ತಿಳಿದು ತಿಳಿಯದ ಹಾಗೆ ವರ್ತಿಸುತ್ತಾರೆ. ಈಗಾಗಲೇ ಪುರಸಭೆಯಿಂದ ಎರಡು ದಿನಕ್ಕೊಮ್ಮೆ ಪುರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ. ಇತ್ತ ನೀರು ಪೋಲಾಗಿ ಬಂಡೀಮಠದ ಬಸ್ ನಿಲ್ದಾಣದಲ್ಲಿ ಮಳೆ ನೀರಿನಲ್ಲಿ ನಿಲ್ಲುತ್ತದೆ. ಅಕ್ಕ ಪಕ್ಕದ ಚರಂಡಿಯಲ್ಲಿ ಕೂಡ ನೀರು ಹರಿಯುತ್ತದೆ. ಒಂದು ಕಡೆಯಿಂದ ವಿದ್ಯುತ್ ಪೋಲು ಇನ್ನೊಂದು ಕಡೆಯಿಂದ ಅಮೂಲ್ಯ ನೀರು  ಪೋಲು. ಇದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.

Related posts

Leave a Reply

Your email address will not be published. Required fields are marked *