Breaking News

ಕಾರ್ಕಳದ ಬಹು ಪುರಾತನ ನಾಗರಬಾವಿ ಕರೆ, ಕೃಷಿ ಸಂಜೀವಿನಿ ಯೋಜನೆಯಡಿ ಹೂಳೆತ್ತುವ ಕಾರ್ಯ

ಕಾರ್ಕಳದ ಗೋಮಟೇಶ್ವರ ಹಾಗೂ ಚತುರ್ಮುಖ ಬಸದಿಗೆ ಹೋಗುವ ಮಾರ್ಗದಲ್ಲಿ ಬಹು ಪುರಾತನ ನಾಗರಬಾವಿ ಎಂಬ ಕೆರೆಯನ್ನು ರಾಜ್ಯ ಸರಕಾರದ ಕೃಷಿ ಸಂಜೀವಿನಿ ಯೋಜನೆಯಡಿಯಲ್ಲಿ ಹೂಳೆತ್ತುವ ಕಾಮಗಾರಿಕೆಗೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಚಾಲನೆ ನೀಡಿದರು.
ಕಾರ್ಕಳ ತಹಶೀಲ್ದಾರರಾದ ಗುರುಪ್ರಸಾದ್ ಇದರ ಮುಂದಾಳಾತ್ವ ವಹಿಸಿ ಈ ಕೆರೆಯ ಬಾಕಿ ಕೆಲಸವನ್ನು ಬೇರೆ ಸಂಘ ಸಂಸ್ಥೆಯವರು ವಹಿಸಿಕೊಂಡರು. ಈ ಕಾಮಗಾರಿಗೆ ೨ ಹಿಟಾಚಿ ಯಂತ್ರ ಹೂಳು ಸಾಗಿಸಲು ೨ ಟಿಪ್ಪರ್‌ಗಳು ಹಾಗೂ ಒಂದು ಡಜ್ಜಿಂಗ್ ಯಂತ್ರ. ಈ ಯಂತ್ರ ಸರಾಸರಿ ದಿನಕ್ಕೆ ೧೦ ಗಂಟೆಗಳ ಕಾಲ ಕೆಲಸ ವಹಿಸುತ್ತದೆ. ಈವರೆಗೆ ಕೃಷಿ ಸಂಜೀವಿನಿ ಯೋಜನೆಯಡಿ ಕಾರ್ಕಳ ಸಿಗಡಿಕೆರೆ, ಕಲ್ಲಮ್ಮನ ಕೆರೆ ಹಾಗೂ ಇನ್ನಾ ಗ್ರಾಮದ ಕೆರೆಗೆ ಕಾಯಕಲ್ಪ ದೊರಕಿದೆ.

Related posts

Leave a Reply