Header Ads
Header Ads
Breaking News

ಕಾರ್ಕಳದ ಬಿಂದಾ ನಗರದಲ್ಲಿ ರಸ್ತೆ ಸಮಸ್ಯೆ .ರಸ್ತೆಯಲ್ಲೆಲ್ಲ ಬೃಹತ್ತಾಕಾರದ ಹೊಂಡಗುಂಡಿ.

ಕಾರ್ಕಳ ಪುರಸಭಾ ವ್ಯಾಪ್ತಿಯ5ನೇ ವಾರ್ಡಿನ ೩ನೇ ಅಡ್ಡ ರಸ್ತೆಯ ಬಿಂದಾ ನಗರದ ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಭಾಗದಲ್ಲಿ ಸುಮಾರು ೫೦ ಮನೆಗಳಿದ್ದು ಇಲ್ಲಿ ಜನರಿಗೆ ವಾಹನದಲ್ಲಿ ಆಗಲಿ ಅಥವ ಕಾಲು ನಡಿಗೆಯಲ್ಲಿ ಸಾಗಲು ಕಷ್ಟಸಾಧ್ಯವಾಗಿದೆ.ಕಾರ್ಕಳ ಪುರಸಭೆಯ ವ್ಯಾಪ್ತಿಯ ಹಲವು ಕಡೆ ಜನ ಸಂಚಾರವಿಲ್ಲದ ರಸ್ತೆಗಳಿಗೆ ಇಂಟರ್‌ಲಾಕ್ ಹಾಗು ಡಾಮರೀಕರಣ ಮಾಡಿದ ಉದಾಹರಣೆಗಳಿವೆ. ಆದರೆ ಇಷ್ಟು ಜನಸಂಖ್ಯೆ ಇರುವ ಮನೆಗಳಿರುವ ಈ ರಸ್ತೆಗೆ ಡಾಮರೀಕರಣವಾಗಲಿ ಇಂಟರ್‌ಲಾಕ್ ಆಳವಡಿಸದೆ ಇರುವುದು ನಿಜಕ್ಕೂ ಆಶ್ಚರ್ಯ.ಈ ರಸ್ತೆಯಲ್ಲಿ ಅಟೊ ರಿಕ್ಷಾ ಹಾಗೂ ಬೇರೆ ವಾಹನದ ಚಾಲಕರು ಸಂಚರಿಸಲು ಒಪ್ಪುತ್ತಿಲ್ಲ. ಯಾರಾದರು ಅನಾರೊಗ್ಯ ಪೀಡಿತರಾದಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೊಗುವುದೇ ಒಂದು ದೊಡ್ಡ ಸಮಸ್ಯೆ. ಶಾಲಾ ಮಕ್ಕಳಿಗೆ ಮನೆಯಿಂದ ಮುಖ್ಯ ರಸ್ತೆಗೆ ತಂದು ಬಿಡಬೇಕಾದ ಪರಿಸ್ಥಿತಿ ಮೊಣಕಾಲಿನ ವರೆಗೆ ರಸ್ತೆಯಲ್ಲಿ ನೀರು ತುಂಬಿದ ಹೊಂಡಗಳು ಈ ರಸ್ತೆಯ ಉದ್ದಕ್ಕೂ ಕಾಣ ಸಿಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ರಸ್ತೆಗಳಿಗೆ ಬೇಕಾದಷ್ಟು ಅನುದಾನ ಬಿಡುಗಡೆಗೊಂಡರು ಕಾರ್ಕಳ ಪುರಸಭೆ ಯಾಕೆ ಬಳಸುತ್ತಿಲ್ಲವೆಂಬುವುದು ಪ್ರಶ್ನೆಯಾಗಿದೆ.
ಪುರಸಭೆಗೆ ಹಲವು ಬಾರಿ ಮನವಿ ಕೊಟ್ಟರೂ ಅಧಿಕಾರಿಗಳು ಹಾಗು ಚುನಾಯಿತ ಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಕೇವಲ ಆಶ್ವಾಸನೆ ಬಿಡುಗಡೆ ಮಾಡಿ ಹೋಗುತ್ತಾರೆಯೇ ವಿನಾಃ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

Related posts

Leave a Reply