Header Ads
Header Ads
Header Ads
Breaking News

ಕಾರ್ಕಳದ ಬೈಲೂರಿಗೆ ಆಗಮಿಸಿದ ಮಣಿಪುರ ಸ್ಪೀಕರ್ ನಾವಿಂದು ಪಾಶ್ಚತ್ಯ ಸಂಸ್ಕ್ರತಿಗೆ ಮಾರು ಹೋಗಿದ್ದೇವೆ ಮಣಿಪುರದ ವಿಧಾನ ಸಭಾ ಸ್ಪೀಕರ್ ಕೇಮ್ ಚಂದ್ ಸಿಂಗ್ ಹೇಳಿಕೆ

ಕಾರ್ಕಳದ ಬೈಲೂರಿಗೆ ಆಗಮಿಸಿದ ಮಣಿಪುರದ ವಿಧಾನ ಸಭಾ ಸ್ಪೀಕರ್ ವೈ.ಕೇಮ್ ಚಂದ್ ಸಿಂಗ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಣಿಪುರ ಪ್ರಾಂತದ ಪ್ರಚಾರಕರಾದ ಬೈಲೂರಿನ ಮೃತ್ಯುಂಜಯರವರ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಬೈಲೂರಿಗೆ ಆಗಮಿಸಿದ್ದರು. ಬೈಲೂರು ಮಾರಿಯಮ್ಮ ಪ್ರೆಂಡ್ಸ್ ಹಾಗೂ ಗ್ರಾಮಸ್ಥರ ಪರವಾಗಿ ತುಳುನಾಡಿನ ಸಂಪ್ರದಾಯ ಶೈಲಿಯಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.

ಮೊದಲು ಮಾರಿಯಮ್ಮ ಗುಡಿಗೆ ತೆರಳಿ ದೇವಿಯ ದರ್ಶನವನ್ನು ಪಡೆದುಕೊಂಡು ಆ ಬಳಿಕ ಸಭಾ ಭವನದಲ್ಲಿ ನಡೆದ ನೀರೆ ರಾಮಕೃಷ್ಣ ಆಶ್ರಮದ ವಿನಾಯಕಾನಂದ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಮ್ ಚಂದ್ ಇಡೀ ವಿಶ್ವಕ್ಕೆ ಸಹೋದರತೆಯ ಸಂಬಂಧವನ್ನು ತಿಳಿ ಹೇಳಿದವರು ಭಾರತೀಯರು ವಿದೇಶಿಗರು ನಲಂಧ ವಿಶ್ವ ವಿದ್ಯಾಲಯಕ್ಕೆ ಬಂದು ಭಾರತೀಯ ಸಂಸ್ಕ್ರತಿಯನ್ನು ಅದ್ಯಾಯನ ಮಾಡುತ್ತಾರೆ ಆದರೆ ನಾವಿಂದು ಪಾಶ್ಚತ್ಯ ಸಂಸ್ಕ್ರತಿಗೆ ಮಾರಿಹೋಗಿದ್ದೇವೆ ಅಂತಾ ಖೇದ ವ್ಯಕ್ತಪಡಿಸಿದರು.

Related posts

Leave a Reply