Header Ads
Header Ads
Breaking News

ಕಾರ್ಕಳದ ಬೋರ್ಡ್ ಹೈಸ್ಕೂಲ್ ಕೊಠಡಿಯಲ್ಲಿ ಮುಖ್ಯ ಶಿಕ್ಷಕರು ಬಾಡಿಗೆಗೆ ಹಾಕಿ ಅದಾಯ ಗಳಿಸುತ್ತಿದ್ದಾರೆ ಎನ್ನುವ ಅರೋಪ

ಕಾರ್ಕಳ: ಶತಮಾನಗಳನ್ನು ಪೂರೈಸಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಬೋರ್ಡ್ ಹೈಸ್ಕೂಲ್‌ನ ಶಾಲಾ ಕೊಠಡಿಯಲ್ಲಿ ಇದೀಗ ಸಿಮೆಂಟ್ ದಾಸ್ತಾನು ಇರಿಸುವ ಮೂಲಕ ಸಿಮೆಂಟ್ ಗೋದಾಮು ಅಗಿದೆ. ಒಂದೆಡೆ ಕೊಠಡಿಯ ಕೊರತೆ ಮತ್ತೊಂದೆಡೆ ಮುಖ್ಯ ಶಿಕ್ಷಕರು ಗೋದಾಮು ಬಾಡಿಗೆಗೆ ಹಾಕಿ ಅದಾಯ ಗಳಿಸುತ್ತಿದ್ದಾರೆ ಎನ್ನುವ ಅರೋಪ ಬಲವಾಗಿದೆ ಮೂಡಿದೆ.

ಕಾರ್ಕಳ ಬೋರ್ಡ್ ಹೈಸ್ಕೂಲ್ ಶಾಲಾ ಕೊಠಡಿಯೊಳಗೆ ರಾಜಕೀಯ ಪಕ್ಷಕ್ಕೆ ಸೇರಿದ ಗುತ್ತಿಗೆದಾರನೋರ್ವ ಒಳ ಒಪ್ಪಂದದ ಮೂಲಕ ಬಾಡಿಗೆಗೆ ಕೊಠಡಿ ಪಡೆಯಲಾಗಿದ್ದು ತನ್ನ ಗುತ್ತಿಗೆ ಕಾಮಗಾರಿಗಳಿಗೆ ಬೇಕಾಗುವ ಪರಿಕರಗಳನ್ನು ಇಲ್ಲಿ ದಾಸ್ತಾನಿರಿಸುವ ಮೂಲಕ ಇದೀಗ ಕೊಠಡಿ ಗೋದಾಮಾಗಿ ಬದಲಾಗಿದೆ. ಸೇಲ್ ಟ್ಯಾಕ್ಸ್, ಅದಾಯ ತೆರಿಗೆ ಹಾಗೂ ಇನ್ನಿತರ ಸರಕಾರಿ ಅಧಿಕಾರಿಗಳ ಕಣ್ಣು ತಪ್ಪಿಸಲು ಸರಕಾರಿ ಕಟ್ಟಡ ಬಳಕೆ ಮಾಡಲಾಗಿದೆ ಎನ್ನುತ್ತಾರೆ ಸ್ಥಳಿಯರು.

ಮಕ್ಕಳ ಹಕ್ಕು ನಿಯಮದ ಪ್ರಕಾರ ಶಾಲಾ ಅವಣದೊಳಗೆ ಯಾವುದೇ ಘನ ವಾಹನಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಅದರೆ ಇಲ್ಲಿ ವಾರದ ಮೂರು ದಿನ ಸಿಮೆಂಟ್ ಲೋಡ್ ಹೊತ್ತುಕೊಂಡು ಘನವಾಹನಗಳು ಶಾಲಾ ಅವರಣದೊಳಗೆ ಅಗಮಿಸುತ್ತಿವೆ. ನಂತರ ಗುತ್ತಿಗೆದಾರನ ಕಾಮಗಾರಿಗಳಿಗೆ ಇಲ್ಲಿಂದಲೇ ಸರಬರಾಜು ಅಗುತ್ತಿದೆ. ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪ್ರೌಢಶಾಲಾ ವಿಭಾಗ, ಸರಕಾರಿ ಐಟಿಐ ಗಳು ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕೊಠಡಿಯ ಅವಶ್ಯಕತೆ ಇದ್ದರೂ ಇದ್ದ ತರಗತಿಯಲ್ಲಿ ಬದಲಾವಣೆ ಮಾಡುವ ಮೂಲಕ ತರಗತಿಗಳು ನಡೆಯುತ್ತಿವೆ. ಅಂತಹುದರಲ್ಲಿ ಸರಕಾರಿ ಕೊಠಡಿಯಲ್ಲಿ ಇಂತಹ ಖಾಸಗಿ ವ್ಯಕ್ತಿಗಳಿಗೆ ಗೋದಾಮು ಮಾಡಲು ಅವಕಾಶ ನೀಡಿದವರ ವಿರುದ್ದ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳದೇ ಇರುವುದು ಖೇದಕರವಾಗಿದೆ.

Related posts

Leave a Reply

Your email address will not be published. Required fields are marked *