Breaking News

ಕಾರ್ಕಳದ ಬ್ಯಾಡ್ಮಿಂಟನ್ ಕ್ರೀಡಾಳುಗಳಿಗೆ ಸಂಕಷ್ಟ

ಕಾರ್ಕಳದ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟ ಜು.24  ರಂದು ಕಾರ್ಕಳದ ಪೆರ್ವಾಜೆ ಸರಕಾರಿ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಆಡಲು ಅನಾನುಕೂಲತೆ ಇದ್ದು ಈ ಹಿಂದೆ ಇದೇ ಕ್ರೀಡಾಂಗಣದಲ್ಲಿ ಆಡಿದ ವಿದ್ಯಾರ್ಥಿಗಳು ಜಾರಿ ಬಿದ್ದು ಗಾಯಗೊಂಡಿದ್ದಾರೆ ಮಕ್ಕಳಿಗೆ ಈ ಕ್ರೀಡಾಂಗಣಲ್ಲಿ ಭದ್ರತೆ ಇಲ್ಲ ಎಂದು ಸ್ಥಳೀಯರಾದ ವಲೇರಿಯನ್ ಪಾಯಸ್ ತಿಳಿಸಿದ್ದಾರೆ.

ಅವರು ಖಾಸಗಿ ಹೊಟೇಲ್ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು. ಈ ಕ್ರೀಡಾಂಗಣದಲ್ಲಿ ಕ್ರೀಡಾಳುಗಳಿಗೆ ಬೇಕಾದ ಯಾವ ಸಮರ್ಪಕ ಸೌಲಭ್ಯವೂ ಇಲ್ಲ ಆದರೂ ಸರಕಾರಿ ಶಾಲೆಯ ದೈ.ಶಿಕ್ಷಕ ಪ್ರಭಾಕರ ಜೈನ್ ಯಾವುದೋ ಹಿತಾಸಕ್ತಿಗಳಿಗೆ ಮಣಿದು ಅದೇ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸಬೇಕು ಎಂದು ಕ್ರೀಡಾಳುಗಳ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ ಈ ಕುರಿತು ಶಿಕ್ಷಣ ಇಲಾಖೆ ಮೇಲಾಽಕಾರಿ ಅವರಲ್ಲಿ ಈ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸಬೇಡಿ ಕ್ರೀಡಾಳುಗಳ ಹೆತ್ತವರು ಬೇರೆಡೆ ಕ್ರೀಡಾಕೂಟ ನಡೆಸಲು ಬೇಕಾದ ಸೌಕರ್ಯ ಒದಗಿಸುತ್ತೇವೆ ಉತ್ತಮ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಸಲು ಸಹಕಾರ ಕೊಡಲಾಗುವುದು ಎಂದರೂ ದೈ.ಶಿಕ್ಷಕರು ಕ್ರೀಡಾಕೂಟವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡು ಅವ್ಯವಸ್ಥೆವುಳ್ಳ ಕ್ರೀಡಾಂಗಣದಲ್ಲಿಯೇ ಕ್ರೀಡಾಕೂಟ ನಡೆಸಲು ಹೊರಟಿರುವುದು ಖಂಡನೀಯ ಇದರಿಂದ ತಾಲೂಕಿನ ಕ್ರೀಡಾಳುಗಳು ಸಂಕಷ್ಟದಲ್ಲಿದ್ದಾರೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯ ಸುಭೀತ್ ಕುಮಾರ್,ವಿಜೇತ್ ಕುಮಾರ್,ಅಖಿಲೇಶ್ ಉಪಸ್ಥಿತರಿದ್ದರು.
ವರದಿ: ಖಲೀಲ್ ಕಾರ್ಕಳ

Related posts

Leave a Reply