
ಕಾರ್ಕಳದ ಭವಾನಿ ವೃತ್ತದ ಕಾಮಗಾರಿ ನಡೆಸದೆ ಅರ್ಧದಲ್ಲಿಯೇ ಕಾಮಗಾರಿ ನಿಲ್ಲಿಸಿ ಅಪಘಾತಗಳ ವಲಯವಾಗಿ ಪರಿಣಮಿಸಿತ್ತು. ಈ ಬಗ್ಗೆ ವಿ4 ನ್ಯೂಸ್ ಸುದ್ದಿಗೋಂದು ಗುದ್ದು ಕಾರ್ಯಕ್ರಮದಲ್ಲಿ ವಿಸ್ರøತ ಚರ್ಚೆ ನಡೆಸಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ತಾತ್ಕಾಲಿಕವಾಗಿ ವೃತ್ತ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಾಳದ ರಸ್ತೆ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಭವಾನಿ ವೃತ್ತವನ್ನು ಕೆಡವಲಾಗಿತ್ತು. ಆ ಬಳಿಕ ವೃತ್ತ ನಿರ್ಮಿಸಲೆಂದು ಕೆಂಪು ಕಲ್ಲುಗಳನ್ನು ತಂದು ಹಾಕಲಾಗಿತ್ತು. ಆ ಕಲ್ಲು ರಸ್ತೆಯಲ್ಲೆಲ್ಲ ಹರಡಿ ಅಪಘಾತದ ವಲಯವಾಗಿ ಮಾರ್ಪಾಟ್ಟಿತ್ತು. ಈ ಬಗ್ಗೆ ವಿ4 ನ್ಯೂಸ್ನ ಸುದ್ದಿಗೊಂದು ಗುದ್ದ ನೇರಪ್ರಸಾರದ ಕಾರ್ಯಕ್ರಮದಲ್ಲಿ ವಿಸೃತವಾಗಿ ಚರ್ಚಿಸಲಾಗಿತ್ತು. ಆ ಬಳಿಕ ಎಚ್ಚೆತ್ತ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಭವಾನಿ ಮಿಲ್ ಎದುರಿರುವ ವೃತ್ತಕ್ಕೆ ಕೆಂಪುಕಲ್ಲಿನ ತಾತ್ಕಾಲಿಕವಾಗಿ ವೃತ್ತವನ್ನು ನಿರ್ಮಿಸಿ ಸುಣ್ಣ ಬಳಿದು ನಾಮಫಲಕವನ್ನು ಅಳವಡಿಸಿ ದಿನಂಪ್ರತಿ ಆಗುವ ಅಪಘಾತಗಳನ್ನು ತಪ್ಪಿಸಿ ಪ್ರಯಾಣಿಕರಿಗೆ ಹಾಗೂ ವಾಹನ ಚಾಲಕರಿಗೆ ಅನುಕೂಲ ಮಾಡಿರುತ್ತಾರೆ. ಇದರಿಂದಲೇ ಸ್ಥಳೀಯರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿರುತ್ತಾರೆ. ಆದಷ್ಟು ಬೇಗ ಪೂರ್ಣಪ್ರಮಾಣದ ವೃತ್ತವನ್ನು ನಿರ್ಮಿಸಿ ವೃತ್ತಕ್ಕೆ ಹೈಮಾಸ್ಟ್ ದೀಪವನ್ನು ಅಳವಡಿಸಬೇಕೆಂದು ಸ್ಥಳೀಯರ ಬೇಡಿಕೆಯಾಗಿದೆ. ಅದಲ್ಲದೆ ವಿ4 ಮಾಧ್ಯಮದ ಮೂಲಕ ಬಹು ಸಮಯದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಮಾಧ್ಯಮಕ್ಕೆ ತುಂಬುಹೃದಯದ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.