Header Ads
Header Ads
Breaking News

ಕಾರ್ಕಳದ ವಸಂತ ಶೆಟ್ಟಿಯವರು ಖರೀದಿಸಿದ ಗೋಧಿ ಹಿಟ್ಟಿನಲ್ಲಿ ರಬ್ಬರ್ ಮಿಶ್ರಣ ಪತ್ತೆ.

ವಸಂತ ಶೆಟ್ಟಿಯವರು ಅಂಗಡಿಯಿಂದ1 ಕೆ.ಜಿ. ಆರ್ಶೀವಾದ್ ಗೋಧಿ ಹಿಟ್ಟನ್ನು ಸ್ವಂತಕ್ಕೆ ಬಳಸಲು ಅಂಗಡಿಯಿಂದ ಖರೀದಿಸಿ ಮನೆಯಲ್ಲಿ ಅದಕ್ಕೆ ನೀರು ಬೆರೆಸಿ ಹಿಟ್ಟನ್ನು ನೀರಿನಲ್ಲಿ ಕಲಸಿದಾಗ ಹಿಟ್ಟಿನ ಬದಲಾಗಿ ರಬ್ಬರ್ ತರ ವಸ್ತು ಇವರ ಕೈಗೆ ಅಂಟಿತು. ಇವರು ಅದನ್ನು ಪರಿಶೀಲಿಸಿದಾಗ ರಬ್ಬರನ್ನು ಹಿಡಿದ ಅನುಭವ ಆಯಿತು. ಇದನ್ನು ರೊಟ್ಟಿ ಮಾಡಲು ಪ್ರಯತ್ನಿಸಿದಾಗ ರೊಟ್ಟಿಯ ಆಕಾರ ಬರುತ್ತಿರಲಿಲ್ಲ. ಅದಲ್ಲದೆ ಬಿಸಿ ಕಾವಲಿಯಲ್ಲಿ ರೊಟ್ಟಿ ತರ ಮಾಡಿ ಹಾಕಿದಾಗ ಕೂಡಲೇ ರೊಟ್ಟಿ ತುಂಬಾ ಉಬ್ಬಿಕೊಂಡು ರಬ್ಬರ್ ಸುಟ್ಟ ವಾಸನೆ ಬರಲು ಪ್ರಾರಂಭವಾಯಿತು ಎನ್ನುತ್ತಾರೆ. ಈ ಹಿಟ್ಟಿನ ಬಗ್ಗೆ 3,4 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಸಾರವಾಗಿತ್ತು 1 ಕೆ.ಜಿ. ಹಿಟ್ಟಿನಲ್ಲಿ ಸುಮಾರು 250 ಗ್ರಾಂ ರಬ್ಬರ್ ಮಿಶ್ರಿತ ಹಿಟ್ಟು ಪತ್ತೆಯಾಗಿದೆ. ಇಂತಹ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ತಿಂದರೆ ತಿಂದವರ ಆರೋಗ್ಯದ ಸ್ಥಿತಿ ಹೇಗಿರಬಹುದು ಅಂತ ನಾವು ಅಲೋಚಿಸಬೇಕು. ಇಂತ ಕಲಬೆರಕೆ ಹಿಟ್ಟನ್ನು ಉತ್ಪತ್ತಿ ಮಾಡುವ ಕಾರ್ಖಾನೆಗಳಿಗೆ ಸರಕಾರವು ಕಡಿವಾಣ ಹಾಕಬೇಕಾಗಿದೆ.

Related posts

Leave a Reply