Header Ads
Header Ads
Breaking News

ಕಾರ್ಕಳದ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದಲ್ಲಿ ರೋಗಿಗಳಿಗೆ ಹಾಗೂ ಕಷ್ಟಗಳಿಗೆ ಒಳಗಾದವರಿಗಾಗಿ ವಿಶೇಷ ಪ್ರಾರ್ಥನೆ

ಕಾರ್ಕಳದಲ್ಲಿರುವ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಎರಡನೇ ದಿನವಾದ ಇಂದು ರೋಗಿಗಳಿಗೆ ಹಾಗೂ ವಿವಿಧ ರೀತಿಯ ಕಷ್ಟಗಳಿಗೆ ಒಳಗಾದವರಿಗೆ ಡಾ| ರೋಬರ್ಟ್ ಮಿರಾಂಡರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಬಳಿಕ ಮಾತನಾಡಿದ ಅವರು, ಸುಖ ದುಃಖದ ಮಿಡಿತವೆ ಜೀವನ ನಮಗಿಂತಲೂ ಕಷ್ಟದಲ್ಲಿರುವವರಿಗೆ ಸಾಂತ್ವನ ನೆರವು ನೀಡುವ ಮೂಲಕ ನಮ್ಮ ನೋವನ್ನು ಮರೆಯಬೇಕು ಎಂದರು. ಈ ಸಂದರ್ಭದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಅಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ ಇಂದು ನಾವು ವಿಶೇಷವಾಗಿ ರೋಗಿಗಳಿಗೋಸ್ಕರ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ. ದೂರದ ಊರುಗಳಿಂದ ಬಂದ ಭಕ್ತಾಧಿಗಳು ಶಾಂತಿ ಸಮಾಧಾನವನ್ನು ಹೊಂದಿ ಹಿಂದಿರುಗಿದ್ದಾರೆ ಇನ್ನು ೩ ದಿನಗಳಲ್ಲಿ ವಿವಿಧ ಪೂಜಾ ವಿಧಿಗಳು ನಡೆಯಲಿರುವುದು ಎಂದು ಹೇಳಿದರು.

Related posts

Leave a Reply