Header Ads
Header Ads
Breaking News

ಕಾರ್ಕಳದ ಸಾಣೂರು ಗ್ರಾಮ ಪಂಚಾಯತ್ ಮತದಾನ

ಕಾರ್ಕಳದ ಸಾಣೂರು ಗ್ರಾಮ ಪಂಚಾಯತ್ ೩ನೇ ವಾರ್ಡಿಗೆ ಇಂದು ಮತದಾನ ನಡೆಯಿತು. ಸುಮಾರು ೫ ತಿಂಗಳ ಹಿಂದೆ ಕುರ್ಷಿದ್ ಗ್ರಾಮ ಪಂಚಾಯತ್ ಸದಸ್ಯರ ಅಕಾಲಿಕ ಮರಣದ ನಂತರ ಇಂದು ಮರುಮತದಾನ ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ಮತದಾರರು ತುಂಬಾ ಉತ್ಸಾಹದಿಂದ ಮತದಾನ ಮಾಡುವುದು ಕಂಡು ಬಂತು. ಕಾಂಗ್ರೆಸ್ ಆಭ್ಯರ್ಥಿಯಾಗಿ ರವೀಂದ್ರ ಶಾಂತಿ ಹಾಗೂ ಬಿ.ಜೆ.ಪಿ ಅಭ್ಯರ್ಥಿಯಾಗಿ ದರಿಕೆರೆ ನಾಗೇಂದ್ರ ಚುನಾವಣ ಕಣದಲ್ಲಿದ್ದು. ಇಬ್ಬರು ಕೂಡಾ ಮೊದಲ ಸಲ ಚುನವಣೆ ಎದುರಿಸುತ್ತಿದ್ದಾರೆ. ಜೂನ್ 17 ರಂದು ಮತದಾನಗಳ ಎಣಿಕೆ ನಡೆಯಲಿದೆ.  

Related posts

Leave a Reply