Header Ads
Header Ads
Breaking News

ಕಾರ್ಕಳದ ಸಿಗಡಿ ಕೆರೆಯಿಂದ ಗದ್ದೆ ಜಾಗಕ್ಕೆ ಕೊಳಚೆ ನೀರು, ವಾಸನೆಯುಕ್ತ ವಾತಾವರಣದಲ್ಲಿ ಪರಿಸರದ ನಿವಾಸಿಗಳು


ಕಾರ್ಕಳ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. ೩ರಲ್ಲಿ ಸಿಗಡಿ ಕೆರೆಯ ಗಡಿ ಪ್ರದೇಶದಲ್ಲಿ ಗದ್ದೆ ಜಾಗಕ್ಕೆ ನುಗ್ಗಿ ಕೊಳಚೆ ನೀರಿನ ಕೆರೆಯಾಗಿ ಮಾರ್ಪಟ್ಟಿದೆ.
ಕಳೆದ ಎರಡು ತಿಂಗಳ ಹಿಂದೆ ಈ ಕೊಳಚೆ ಕೆರೆಯ ಪಕ್ಕದ ಸಿಗಡಿ ಕೆರೆಯನ್ನು ಶಾಸಕರ ನೇತೃತ್ವದಲ್ಲಿ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಮಾರು ೧೮ ದಿನಗಳ ಕಾಲ ಕಸ ಕಡ್ಡಿ, ಹೂಳನ್ನು ತೆಗೆಸಿ ಕೆರೆಯನ್ನು ಬಹಳ ಸುಂದರವಾಗಿ ಮಾಡಿ, ಇದೀಗ ಶಾಸಕರು, ಅವರ ಪತ್ನಿ ಹಾಗೂ ಬಿಜೆಪಿ ನಾಯಕರು ಬಾಗಿನ ಬಿಟ್ಟು ಅವರ ಕರ್ತವ್ಯವನ್ನು ಮೆರೆದರು. ಆದರೆ ಇದರ ಪಕ್ಕದಲ್ಲಿರುವ ಸುಮಾರು ೨೫ರಿಂದ ೩೦ ಮನೆಗಳಿಗೆ ಕೊಳಚೆ ನೀರು, ಹೋಟೆಲ್‌ಗಳ ತ್ಯಾಜ್ಯ, ಅಂಗಡಿ ಗ್ಯಾರೇಜು ನೀರು ಕೆರೆಯಲ್ಲಿ ಶೇಖರಣೆ ಆಗಿ ಅಸುಪಾಸಿನವರಿಗೆ ದುರ್ನಾತ ಸೇವಿಸುವ ಪರಿಸ್ಥಿತಿ ಬಂದಿದೆ.
ಈಗಾಗಲೇ ಈ ಪರಿಸರದಲ್ಲಿ ಸೊಳ್ಳೆ ಕಾಟ ಯತೇಚ್ಚವಾಗಿದ್ದು, ಮಕ್ಕಳು ಹಲವು ರೋಗಗಳಿಗೆ ಬಲಿಯಾಗುವ ದಿನ ದೂರವಿರಲಾದರು. ಪುರಸಭೆ ಸದಸ್ಯರಿಗೆ ಈ ಗಂಬೀರ ಸಮಸ್ಯೆ ಇನ್ನೂ ಕೂಡಾ ಅರ್ಥವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳಬೇಕಾಗಿದೆ.

Related posts

Leave a Reply