Header Ads
Header Ads
Breaking News

ಕಾರ್ಕಳ:ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಸೌತ್ ಕೆನಾರ ಪೋಟೋಗ್ರಾಫರ್ ಅಸೋಸಿಯೇಶನ್ ಕಾರ್ಕಳ ಹಾಗೂ ರಕ್ತ ನಿಧಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇವರ ಸಹಭಾಗಿತ್ವದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರು.

ರಕ್ತದಾನ ಶಿಬಿರವನ್ನು ಡಾ| ಹರ್ಷ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಒಮ್ಮೆ ರಕ್ತ ದಾನ ಮಾಡಿದರೆ ಕನಿಷ್ಟ ೩ ಮಂದಿಯ ಜೀವ ಉಳಿಸಬಹುದು ರಕ್ತದಾನ ಅತ್ಯಂತ ಪವಿತ್ರವಾದ ದಾನ ಎಂದು ಹೇಳಿದರು.
ನಂತರ ಮಾತನಾಡಿದ ಚೆರ್‌ಮ್ಯಾನ್ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಜಯಕರ ಶೆಟ್ಟಿ ಮಾತನಾಡಿ ನಾವು ಈ ಸಂಸ್ಥೆ ಪ್ರಾರಂಭ ಮಾಡಿ ೭ ತಿಂಗಳಾಗುತ್ತ ಬಂತು ಇದರಿಂದ ತುಂಬಾ ಸಮಾಜ ಮುಖಿ ಕೆಲಸಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ಆಫೀಸರ್ ಕಾರ್ಕಳ ಡಾ| ಕೆ.ಬಿ. ಜೋಶಿ, ಪೋಟೋಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಭಾಸ್ಕರ್ ಕುಲಾಲ್, ಡಾ| ಜ್ಞಾನೇಶ್ ಕಾಮತ್, ವೃಷಭ್ ರಾಜ ಕಡಂಬ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply