Header Ads
Header Ads
Breaking News

ಕಾರ್ಕಳ : ಕಳಚಿ ಬೀಳುವ ಸ್ಥಿತಿಯಲ್ಲಿರುವ ಸಾಮಾಗ್ರಿ ಮೇಲೆರಿಸುವ ಲಿಫ್ಟ್

ಕಾರ್ಕಳ ನಗರದ ಮುಖ್ಯ ರಸ್ತೆಯ ಸಾಲ್ಮಾರ ಎಂಬಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಕಟ್ಟಡ ಸಾಮಾಗ್ರಿ ಮೇಲೆರಿಸುವ ಲಿಫ್ಟ್ ಕಳಚಿ ಬಿಳುವ ಅಪಯಕಾರಿ ಸ್ಥಿತಿಯಲ್ಲಿದ್ದು ದೊಡ್ಡ ಅನಾಹುತಕ್ಕೆ ಅಹ್ವಾನ ನೀಡುವ ಸ್ಥಿತಿಯಲ್ಲಿದೆ. 

ಕಟ್ಟಡಕ್ಕೆ ಹೊಂದಿಕೊಂಡತೆ ಕಬ್ಬಿಣದ ರಾಡ್ ಬಳಸಿ ಲಿಫ್ಟ್ ನಿರ್ಮಿಸಲಾಗಿದ್ದು ತುಕ್ಕು ಹಿಡಿದಿರುವುದರಿಂದ ಇದಕ್ಕೆ ಆಧಾರವಾಗಿ ಕಟ್ಟಿರುವ ಮರದ ತುಂಡುಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ. ಅನಾಹುತ ನಡೆದಲ್ಲಿ ಭಾರವಾದ ರಾಡ್ ಇದರ ಬದಿಯಲ್ಲಿರುವ ಹೈ ಟೆನ್ಸನ್ ತಂತಿಗಳ ಮೇಲೆ ಬಿದ್ದು ಅನಾಹುತ ಆಗುವ ಸಂಭವವಿದೆ. ಪೇಟೆಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಕಟ್ಟಡ ಜನನಿ ಬೀಡ ಪ್ರದೇಶದಲ್ಲಿರುದರಿಂದ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಶೀಘ್ರ ಗಮನ ಹರಿಸಿದಲ್ಲಿ ಉತ್ತಮ ಎಂದು ಇಲ್ಲಿಯ ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

Related posts

Leave a Reply

Your email address will not be published. Required fields are marked *